ಹಾವೇರಿ:ಹೈಸ್ಕೂಲ್ ರೋಡ್ನ ಎಸ್‌ಬಿಐ ಶಾಖೆಯ ಐವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಎಸ್‌ಬಿಐ ಶಾಖೆಯನ್ನ ಸೀಲ್ ಡೌನ್ ಮಾಡಲಾಗಿದೆ.
ಹಾವೇರಿ: ಎಸ್‌ಬಿಐ ಶಾಖೆಯ ಐವರು ಸಿಬ್ಬಂದಿಗೆ ಕೊರೊನಾ... ಕಚೇರಿ ಸೀಲ್ ಡೌನ್ - ಹಾವೇರಿ ಕೊರೊನಾ ಸುದ್ದಿ
ಹಾವೇರಿಯ ಹೈಸ್ಕೂಲ್ ರೋಡ್ನ ಎಸ್‌ಬಿಐ ಶಾಖೆಯ ಐವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
![ಹಾವೇರಿ: ಎಸ್‌ಬಿಐ ಶಾಖೆಯ ಐವರು ಸಿಬ್ಬಂದಿಗೆ ಕೊರೊನಾ... ಕಚೇರಿ ಸೀಲ್ ಡೌನ್ Bank seal down](https://etvbharatimages.akamaized.net/etvbharat/prod-images/768-512-02:50:23:1597396823-kn-hvr-01-sbi-sealdown-7202143-14082020135919-1408f-1597393759-298.jpg)
Bank seal down
ತಾಲೂಕಾಡಳಿತದ ನಿಯಮದಂತೆ ಎಸ್‌ಬಿಐ ಹೈಸ್ಕೂಲ್ ಶಾಖೆ ಹಾಗೂ ಬ್ಯಾಂಕ್ ಇರುವ ಕಟ್ಟಡವನ್ನ ಸಹ ಸೀಲ್ ಡೌನ್ ಮಾಡಲಾಗಿದೆ. ಗ್ರಾಹಕರಿಗೂ ಸಹ ಕೊರೊನಾ ಬಂದಿರುವುದರಿಂದ ಹೆಚ್ಚಿನ ಜಾಗ್ರತೆ ವಹಿಸಲಾಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ಪ್ರಭುದೇವ್ ತಿಳಿಸಿದ್ದಾರೆ.
ಎಟಿಎಂ ಸಹ ಬಂದ್ ಮಾಡಲಾಗಿದ್ದು, ಗ್ರಾಹಕರು ಸಹಕರಿಸುವಂತೆ ಬ್ಯಾಂಕ್ ಮ್ಯಾನೇಜರ್ ಮನವಿ ಮಾಡಿದ್ದಾರೆ.