ಕರ್ನಾಟಕ

karnataka

ETV Bharat / state

9 ತಿಂಗಳ ಗಂಡು ಮಗುವಿಗೆ ಕೊರೊನಾ ಸೋಂಕು

ಕಂಟೇನ್ಮೆಂಟ್​ ಝೋನ್​ನಲ್ಲಿ ವಾಸವಾಗಿದ್ದ ಮಗುವಿನ ಗಂಟಲು ದ್ರವವನ್ನ ಜೂನ್​ 23ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು.

Corona positive for 9 month old baby boy in Haveri
ಹಾವೇರಿಯಲ್ಲಿಂದು 9 ತಿಂಗಳ ಗಂಡು ಮಗುವಿಗೆ ಕೊರೊನಾ ಪಾಸಿಟಿವ್​

By

Published : Jun 27, 2020, 9:05 PM IST

ಹಾವೇರಿ :ಜಿಲ್ಲೆಯ ಸವಣೂರಿನ ಕಂಟೇನ್ಮೆಂಟ್​ ಝೋನ್​ನಲ್ಲಿದ್ದ 9 ತಿಂಗಳ ಗಂಡು ಮಗುವಿಗೆ ಇಂದು ಕೊರೊನಾ ಸೋಂಕು ತಗುಲಿದೆ.

ಈ ಮೂಲಕ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಸೋಂಕಿತ ಮಗುವನ್ನ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಸೇರಿಸಲಾಗಿದೆ. ಸವಣೂರಿನ ಖಾದರಬಾಗ್‌ನಲ್ಲಿ ಗರ್ಭಿಣಿಗೆ (ಪಿ-8699) ಕೊರೊನಾ ದೃಢಪಟ್ಟಿದ್ದರಿಂದ ಈ ಪ್ರದೇಶವನ್ನ ಕಂಟೇನ್ಮೆಂಟ್​ ಝೋನ್​ ಎಂದು ಘೋಷಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕಂಟೇನ್ಮೆಂಟ್​ ಝೋನ್​ನಲ್ಲಿ ವಾಸವಾಗಿದ್ದ ಮಗುವಿನ ಗಂಟಲು ದ್ರವವನ್ನ ಜೂನ್​ 23ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಗುವಿನ ವರದಿ ಇಂದು ಬಂದಿದ್ದು, ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

ABOUT THE AUTHOR

...view details