ಹಾವೇರಿ:ಜಿಲ್ಲೆಯಲ್ಲಿಂದು ಸ್ಟಾಪ್ ನರ್ಸ್ ಸೇರಿದಂತೆ 10 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಹಾವೇರಿಯಲ್ಲಿಂದು ಸ್ಟಾಪ್ ನರ್ಸ್ ಸೇರಿ 10 ಮಂದಿಗೆ ಕೊರೊನಾ - haveri corona update
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಏಳು ಜನರಿಗೆ ಹಾಗೂ ಹಾನಗಲ್ ತಾಲೂಕಿನ ಶಿವಪುರ, ಕುಂಟನಹೊಸಳ್ಳಿ ಹಾಗೂ ಚಿಕ್ಕೇರಿಹೊಸಳ್ಳಿ ಗ್ರಾಮಗಳ ತಲಾ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಹಾವೇರಿ ಜಿಲ್ಲೆಯಲ್ಲಿಂದು ಸ್ಟಾಪ್ ನರ್ಸ್ ಸೇರಿದಂತೆ 10 ಮಂದಿಗೆ ಕೊರೊನಾ ಪಾಸಿಟಿವ್
ಜಿಲ್ಲೆಯ ಸವಣೂರು ಪಟ್ಟಣದ 23 ವರ್ಷದ ಗರ್ಭಿಣಿ ಮಹಿಳೆಯ (P-8699) ಪ್ರಾಥಮಿಕ ಸಂಪರ್ಕದಿಂದ ಏಳು ಜನರಿಗೆ ಸೋಂಕು ತಗುಲಿದೆ. ಹಾನಗಲ್ ತಾಲೂಕಿನ ಶಿವಪುರ, ಕುಂಟನಹೊಸಳ್ಳಿ ಹಾಗೂ ಚಿಕ್ಕೇರಿಹೊಸಳ್ಳಿ ಗ್ರಾಮಗಳ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಸವಣೂರು ಪಟ್ಟಣದ ಗರ್ಭಿಣಿ ಮಹಿಳೆಗೆ ಜೂನ್ 21ರಂದು ಕೊರೊನಾ ಸೋಂಕು ದೃಢಪಟ್ಟಿತ್ತು.