ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರಕ್ಕೆ ಮಹಾಮಾರಿ ಕೊರೊನಾ ಹಬ್ಬವಾಗಿದೆ: ಎಂ.ಬಿ.ಪಾಟೀಲ್ ವ್ಯಂಗ್ಯ - Former minister MB Patil in Haveri

ನಾನೇನಾದರು ಸಿಎಂ ಅಥವಾ ಆರೋಗ್ಯ ಮಂತ್ರಿ ಆಗಿದ್ದರೆ ರಾಜ್ಯಕ್ಕೆ ಉಚಿತವಾಗಿ ಸ್ಯಾನಿಟೈಸರ್ ವಿತರಿಸುತ್ತಿದ್ದೆ. ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಡಿಸ್ಟಲರಿ ಘಟಕಗಳಿಗೆ ಆದೇಶ ಮಾಡಿದ್ದರೆ ಸಾಕಾಗಿತ್ತು. ಅವರೆ ಸ್ಯಾನಿಟೈಸರ್‌ನ್ನು ಉಚಿತವಾಗಿ ವಿತರಿಸುತ್ತಿದ್ದರು. ಸ್ಯಾನಿಟೈಸರ್ ಖರೀದಿಯಲ್ಲಿ ಹಣ ಹೊಡೆಯಲು ಪೈಪೋಟಿ ನಡೆದಿದೆ ಎಂದು ಆರೋಪಿಸಿದರು.

ಎಂ.ಬಿ.ಪಾಟೀಲ್ ವ್ಯಂಗ್ಯ
ಎಂ.ಬಿ.ಪಾಟೀಲ್ ವ್ಯಂಗ್ಯ

By

Published : Aug 3, 2020, 8:27 PM IST

ಹಾವೇರಿ: ವಿಶ್ವವೇ ಕೊರೊನಾದಿಂದ ತಲ್ಲಣಗೊಂಡಿದೆ. ಆದರೆ ರಾಜ್ಯ ಸರ್ಕಾರಕ್ಕೆ ಮಹಾಮಾರಿ ಕೊರೊನಾ ಹಬ್ಬವಾಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಕೊರೊನಾ ಮಹಾಮಾರಿ ಕಲ್ಪವೃಕ್ಷ ಕಾಮಧೇನುವಾಗಿದೆ. ಈ ಕುರಿತಂತೆ ಹೈಕೋರ್ಟ್​ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಎಂ.ಬಿ.ಪಾಟೀಲ್ ವ್ಯಂಗ್ಯ

ಸರ್ಕಾರ ಈ ಕುರಿತಂತೆ ಶ್ವೇತಪುತ್ರ ಹೊರಡಿಸಲಿ. ತಪ್ಪಿತಸ್ಥರನ್ನು ಜೈಲಿಗೆ ಹಾಕಲಿ. ಕೊರೊನಾದ ವಿಚಾರದಲ್ಲಿ ಸರ್ಕಾರ ನೀಡಿರುವ ದಾಖಲೆಗಳೇ ಭ್ರಷ್ಟಾಚಾರವಾಗಿದ್ದನ್ನ ತಿಳಿಸುತ್ತವೆ. ತನಿಖೆಗೆ ಬೇಕಾದ ದಾಖಲೆಗಳನ್ನು ನೀಡಿದ್ದೇವೆ. ತನಿಖೆ ಶುರುವಾದ ಮೇಲೆ ಮತ್ತಷ್ಟು ದಾಖಲೆಗಳನ್ನು ನೀಡುತ್ತೇವೆ ಎಂದು ತಿಳಿಸಿದರು.

ನಾನೇನಾದರು ಸಿಎಂ ಅಥವಾ ಆರೋಗ್ಯ ಮಂತ್ರಿ ಆಗಿದ್ದರೆ ರಾಜ್ಯಕ್ಕೆ ಉಚಿತವಾಗಿ ಸ್ಯಾನಿಟೈಸರ್ ವಿತರಿಸುತ್ತಿದ್ದೆ. ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಡಿಸ್ಟಲರಿ ಘಟಕಗಳಿಗೆ ಆದೇಶ ಮಾಡಿದ್ದರೆ ಸಾಕಾಗಿತ್ತು. ಅವರೆ ಸ್ಯಾನಿಟೈಸರ್‌ನ್ನು ಉಚಿತವಾಗಿ ವಿತರಿಸುತ್ತಿದ್ದರು. ಸ್ಯಾನಿಟೈಸರ್ ಖರೀದಿಯಲ್ಲಿ ಹಣ ಹೊಡೆಯಲು ಪೈಪೋಟಿ ನಡೆದಿದೆ ಎಂದು ಆರೋಪಿಸಿದರು.

ಬೆಡ್ ಇಲ್ಲ, ನರ್ಸ್ ಇಲ್ಲ, ಡಾಕ್ಟರ್ಸ್ ಇಲ್ಲ ಇದನ್ನೆಲ್ಲಾ ಕೇಳಿದರೆ ನೋಟಿಸ್​ ಕೊಡುತ್ತಾರೆ. ವಿಶ್ವದಲ್ಲಿ ರಾಜ್ಯಕ್ಕೆ ಒಳ್ಳೆಯ ಹೆಸರಿತ್ತು. ಅದನ್ನ ಬಿಜೆಪಿ ಸರ್ಕಾರ ಹಾಳು ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು.

ABOUT THE AUTHOR

...view details