ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಆರಂಭ ಆದಾಗಿನಿಂದ ಇಲ್ಲಿಯವರೆಗೆ 17 ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಡಿಡಿಪಿಐ ಅಂದಾನೆಪ್ಪ ವಡಗೇರಿ ತಿಳಿಸಿದ್ದಾರೆ.
ಹಾವೇರಿಯಲ್ಲಿ ಕೊರೊನಾ ಸೋಂಕಿಗೆ 17 ಶಿಕ್ಷಕರು ಬಲಿ! - ಅಂದಾನೆಪ್ಪ ವಡಗೇರಿ ಮನವಿ
ಹಾವೇರಿಯಲ್ಲಿ ಕೊರೊನಾ ಸೋಂಕಿಗೆ ಇದುವರೆಗೂ 17 ಶಿಕ್ಷಕರು ಮೃತಪಟ್ಟಿದ್ದಾರೆ. ಇದರಲ್ಲಿ ಬಹುತೇಕರು (8 ಸಾವು) ಹಿರೇಕೆರೂರು ತಾಲೂಕಿಗೆ ಸೇರಿದವರು ಆಗಿದ್ದಾರೆ.
ಮಹಾಮಾರಿ ಕೊರೊನಾಗೆ ಹಾವೇರಿ ಜಿಲ್ಲೆಯಲ್ಲಿ ಒಟ್ಟು 17 ಶಿಕ್ಷಕರು ಬಲಿ..
ಹಾನಗಲ್, ಹಾವೇರಿಯಲ್ಲಿ ತಲಾ ಓರ್ವ, ಹಿರೇಕೆರೂರು-8, ರಾಣೆಬೆನ್ನೂರು ಹಾಗೂ ಶಿಗ್ಗಾವಿ ತಾಲೂಕಿನಲ್ಲಿ ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ. ಹಿರೇಕೆರೂರು ತಾಲೂಕಿನಲ್ಲಿ ಅತಿಹೆಚ್ಚು ಶಿಕ್ಷಕರು ಸಾವನ್ನಪ್ಪಿದ್ದು, ಸವಣೂರು ತಾಲೂಕಿನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದರು.
ಕೊರೊನಾ ಹರಡದಂತೆ ಎಲ್ಲ ಕ್ರಮ ಕೈಗೊಂಡರು ಸಹ ಈ ರೀತಿ ಕೊರೊನಾಕ್ಕೆ ಬಲಿಯಾಗಿರುವುದು ಬೇಸರ ತರಿಸಿದೆ. ಶಿಕ್ಷಕರು ಆದಷ್ಟು ಮುಂಜಾಗ್ರತಾ ಕ್ರಮ ವಹಿಸುವಂತೆ ಸಲಹೆ ನೀಡಿದರು.