ಕರ್ನಾಟಕ

karnataka

ETV Bharat / state

ಕೊರೊನಾ ಪರೀಕ್ಷೆಗೆ ಮುಂದೆ ಬಾರದ ನಾಗಲಾಪುರ ಜನ: ಕಂಟೇನ್ಮೆಂಟ್​ ಜೋನ್ ಎಂದು ಘೋಷಣೆ ಮಾಡಿದ ಡಿಸಿ

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ನಾಗಲಾಪುರ ಗ್ರಾಮದ ಜನತೆ ಕೊರೊನಾ ತಪಾಸಣೆಗೆ ಮುಂದೆ ಬರುತ್ತಿಲ್ಲ. ಈ ಹಿನ್ನೆಲೆ ನಾಗಲಾಪುರ ಗ್ರಾಮ ಸಂಪರ್ಕಿಸುವ ಎಲ್ಲ ರಸ್ತೆಗಳನ್ನ ಬಂದ್ ಮಾಡಲಾಗಿದೆ.

  corona increase in village s of haveri
corona increase in village s of haveri

By

Published : Jun 4, 2021, 9:47 PM IST

Updated : Jun 4, 2021, 10:55 PM IST

ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ನಗರಗಳಿಗೆ ವಕ್ಕರಿಸಿದ್ದ ಕೊರೊನಾ ಇದೀಗ ಗ್ರಾಮಗಳಲ್ಲಿ ಕಾಡತೊಡಗಿದೆ.

ಕಂಟೇನ್ಮೆಂಟ್​ ಜೋನ್ ಎಂದು ಘೋಷಣೆ ಮಾಡಿದ ಡಿಸಿ

ಈ ಹಿನ್ನೆಲೆ ಜಿಲ್ಲಾಡಳಿತ ಗ್ರಾಮಗಳಲ್ಲಿ ಕೊರೊನಾ ತಪಾಸಣೆ ನಡೆಸಲು ಮುಂದಾಗಿದೆ. ಆದರೆ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ನಾಗಲಾಪುರ ಗ್ರಾಮದ ಜನತೆ ಕೊರೊನಾ ತಪಾಸಣೆಗೆ ಮುಂದೆ ಬರುತ್ತಿಲ್ಲ. ತಪಾಸಣೆಗೆ ಹೋದ ಅಧಿಕಾರಿಗಳನ್ನು ಸಹ ಒಳಗೆ ಬಿಡುತ್ತಿಲ್ಲ. ಈ ಹಿನ್ನೆಲೆ ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ್ ನಾಗಾಲಾಪುರ ಗ್ರಾಮವನ್ನ ಕಂಟೇನ್ಮೆಂಟ್ ಜೋನ್ ಎಂದು ತೀರ್ಮಾನಿಸಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆ ನಾಗಾಲಾಪುರ ಗ್ರಾಮ ಸಂಪರ್ಕಿಸುವ ಎಲ್ಲ ರಸ್ತೆಗಳನ್ನ ಬಂದ್ ಮಾಡಲಾಗಿದೆ. ಹಾಗೆ ಗ್ರಾಮದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗಿದೆ.

Last Updated : Jun 4, 2021, 10:55 PM IST

ABOUT THE AUTHOR

...view details