ಕರ್ನಾಟಕ

karnataka

By

Published : Sep 30, 2020, 9:48 PM IST

ETV Bharat / state

ಹಾವೇರಿ ಜಿಲ್ಲೆಯಲ್ಲಿ ಇಂದು 57 ಜನರಲ್ಲಿ ಕೊರೊನಾ ಪತ್ತೆ...

ಹಾವೇರಿ ಜಿಲ್ಲೆಯಲ್ಲಿ ಇಂದು 57 ಜನರಿಗೆ ಕೊರೊನಾ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8,748 ಕ್ಕೇರಿದಂತಾಗಿದೆ.

Haveri
ಹಾವೇರಿ

ಹಾವೇರಿ: ಜಿಲ್ಲೆಯಲ್ಲಿ ಇಂದು 57 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಕುರಿತಂತೆ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8,748 ಕ್ಕೇರಿದಂತಾಗಿದೆ.

ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಬುಧವಾರ 115 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲಾಡಳಿತ ಬುಧವಾರ ಒಂದು ಮರಣವನ್ನು ದೃಢೀಕರಿಸಿದ್ದು, ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 165 ಕ್ಕೇರಿದಂತಾಗಿದೆ. ಬ್ಯಾಡಗಿ ಮತ್ತು ಹಾನಗಲ್ ತಾಲೂಕಿನಲ್ಲಿ ತಲಾ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ.

ಶಿಗ್ಗಾವಿ ತಾಲೂಕಿನಲ್ಲಿ 25, ಸವಣೂರು ತಾಲೂಕಿನಲ್ಲಿ 03, ರಾಣೆಬೆನ್ನೂರು ತಾಲೂಕಿನಲ್ಲಿ 06, ಹಿರೇಕೆರೂರು ತಾಲೂಕಿನಲ್ಲಿ 10, ಹಾವೇರಿ ತಾಲೂಕಿನಲ್ಲಿ 09 ಜನರಿಗೆ ಕೊರೊನಾ ತಗುಲಿದೆ.

ABOUT THE AUTHOR

...view details