ಹಾವೇರಿ : ಹಾವೇರಿ ಜಿಲ್ಲಾಡಳಿತದಿಂದ ಕೊರೊನಾ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಇಂದು 214 ಜನರಿಗೆ ಕೊರೊನಾ ತಗುಲಿದೆ.
ಹಾವೇರಿಯಲ್ಲಿಂದು 214 ಜನರಿಗೆ ಕೊರೊನಾ - ಹಾವೇರಿ ಕೊರೊನಾ
ಹಾವೇರಿ ಜಿಲ್ಲಾಡಳಿತದಿಂದ ಕೊರೊನಾ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಇಂದು 214 ಜನರಿಗೆ ಕೊರೊನಾ ತಗುಲಿದೆ. ಅಲ್ಲದೆ ಓರ್ವ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದಾರೆ.
ಹಾವೇರಿಯಲ್ಲಿಂದು 214 ಜನರಿಗೆ ಕೊರೊನಾ
ಹಾವೇರಿ ತಾಲೂಕಿನಲ್ಲಿ 69, ಹಾನಗಲ್ ತಾಲೂಕಿನಲ್ಲಿ 21, ರಾಣೆಬೆನ್ನೂರು ತಾಲೂಕಿನಲ್ಲಿ 47, ಶಿಗ್ಗಾಂವಿ ತಾಲೂಕಿನಲ್ಲಿ 15, ಹಿರೇಕೆರೂರು ತಾಲೂಕಿನಲ್ಲಿ 28, ಬ್ಯಾಡಗಿ ತಾಲೂಕಿನಲ್ಲಿ 16, ಸವಣೂರು ತಾಲೂಕಿನ 18 ಜನರಿಗೆ ಸೋಂಕು ದೃಢಪಟ್ಟಿದೆ.
ಇಲ್ಲಿಯವರೆಗೆ ಹಾವೇರಿ ಜಿಲ್ಲೆಯಲ್ಲಿ ಒಟ್ಟು 6772 ಕೊರೊನಾ ಪ್ರಕರಣಗಳು ದೃಢವಾಗಿವೆ. ಅಲ್ಲದೆ ಇಂದು ಕೊರೊನಾ ಸೋಂಕಿನಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇದರಿಂದಾಗಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 130ಕ್ಕೆ ಏರಿಕೆಯಾಗಿದೆ.