ಹಾವೇರಿ: ಹೊಸ ವರ್ಷ ಬಂತೆಂದರೆ ಸಾಕು ಬೇಕರಿಗಳು ಕೇಕ್ಗಳಿಂದ ತುಂಬಿರುತ್ತಿದ್ದವು. ನಾನಾ ಬಗೆಯ ಆಕಾರದ ಕೇಕ್‌ಗಳನ್ನು ಕೊಳ್ಳಲು ಗ್ರಾಹಕರು ಮುಗಿ ಬೀಳುತ್ತಿದ್ದರು. ಆದ್ರೆ ಪ್ರಸ್ತುತ ವರ್ಷ ಕೊರೊನಾ ಕರಿನೆರಳು ಹೊಸ ವರ್ಷಾಚರಣೆ ಮೇಲೂ ಬಿದ್ದಿದೆ. ಆದ್ರೂ ಕೇಕ್ ಕೊಳ್ಳುವವರ ಮತ್ತು ಮಾರುವವರ ಸಂಖ್ಯೆಯೇನೂ ತೀರಾ ಕಡಿಮೆಯಾಗಿಲ್ಲ.
ಕೇಕ್ ಕೊಳ್ಳುವವರು - ಮಾರುವವರು ಏನಂತಾರೆ? ಹಾವೇರಿ ನಗರದ ಕೇಕ್ ಕಾರ್ನರ್, ಕೇಕ್ ಪ್ಯಾಲೇಸ್‌ಗಳು ಹೊಸ ವರ್ಷದ ವೇಳೆ ಪ್ರತಿವರ್ಷ ಸಂಭ್ರಮದ ತಯಾರಿ ನಡೆಸುತ್ತಿದ್ದು, ಗ್ರಾಹಕರಿಂದ ತುಂಬಿರುತ್ತಿದ್ದವು. ಆದರೆ ಪ್ರಸ್ತುತ ವರ್ಷ ಗ್ರಾಹಕರ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಹೊಸ ವರ್ಷಕ್ಕಾಗಿ 10 ಸಾವಿರಕ್ಕೂ ಅಧಿಕ ಕೇಕ್ ತಯಾರಿಸುತ್ತಿದ್ದ ಬೇಕರಿಗಳು ಇದೀಗ ಎರಡರಿಂದ ಮೂರು ಸಾವಿರ ಕೇಕ್ ತಯಾರಿಸಿವೆ. ಕೊರೊನಾದ ನಡುವೆ ಸಹ ಕೇಕ್ಗೆ ಒಂದಿಷ್ಟು ಬೇಡಿಕೆ ಬಂದಿದೆ. ಗ್ರಾಹಕರು ಹೇಳಿದ ರೀತಿಯಲ್ಲಿ ಕೇಕ್ ಮಾಡಿಕೊಡುತ್ತಿದ್ದೇವೆ. ಅರ್ಧ ಕೆಜಿಯಿಂದ ಹಿಡಿದು 25 ಕೆಜೆಯವರೆಗೆ ಕೇಕ್ ತಯಾರಿಸಿದ್ದೇವೆ ಎನ್ನುತ್ತಾರೆ ಬೇಕರಿ ಮಾಲೀಕರು.
ಪ್ರಸ್ತುತ ವರ್ಷ ಕೊರೊನಾ ಇರುವ ಕಾರಣ ಆಚರಣೆಯ ಸಂಭ್ರಮ ಸ್ವಲ್ಪ ಕಡಿಮೆಯಾಗಿದೆ. ಆದರೂ ಸಹ ಕೇಕ್ ಅಂಗಡಿಯವರು ವೆನಿಲ್ಲಾ, ಪೈನಾಪಲ್, ಕೋಲ್ಡ್, ಚಾಕೊಲೇಟ್ ಬಟರ್ಸ್ಕಾಚ್ ಸೇರಿದಂತೆ ವಿವಿಧ ಫ್ಲೇವರ್ಗಳ ಕೇಕ್ ತಯಾರಿಸಿದ್ದಾರೆ. ಇನ್ನೂ ವರ್ಷಾಚರಣೆಗೆ ವಿಶೇಷ ಕೇಕ್ ಮಾಡುವಂತೆ ಆರ್ಡರ್ ನೀಡಿದ್ದೇವೆ. ಆರ್ಡರ್ ನೀಡಿದ ರೀತಿಯಲ್ಲಿ ಕೇಕ್ ತಯಾರಿಸಿದ್ದಾರೆ ಎಂದು ಕೇಕ್ ತಗೆದುಕೊಂಡು ಹೋಗಿ ಹೊಸ ವರ್ಷ ಆಚರಣೆ ಮಾಡುವ ಇಂಗಿತವನ್ನು ಗ್ರಾಹಕರು ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ:ಕೋವಿಡ್ ಭೀತಿ: ಸರಳವಾಗಿ ಹೊಸ ವರ್ಷ ಭರಮಾಡಿಕೊಂಡ ಭಾರತೀಯರು
ಮೊದಲು ಕಂಡುಬಂದ ಕೊರೊನಾ ಜೊತೆಗೆ ಬ್ರಿಟನ್ ರೂಪಾಂತರಿ ಕೊರೊನಾ ಹೊಸ ವರ್ಷಾಚರಣೆ ಮೇಲೆ ಪರಿಣಾಮ ಬೀರಿದೆ. ಸರ್ಕಾರ ಸಹ ಹಲವು ಕಟ್ಟುಪಾಡುಗಳನ್ನು ಹಾಕಿದೆ. ಈ ಹಿನ್ನೆಲೆ, ಹೊಸ ವರ್ಷಾಚರಣೆ ಮಾಡುವವರು ಸರ್ಕಾರದ ನಿಯಮಗಳನ್ನ ಪಾಲಿಸಬೇಕಿದೆ. ಬೆರಳೆಣಿಕೆಯಷ್ಟು ಜನ ಸಾಮಾಜಿಕ ಅಂತರದಲ್ಲಿದ್ದು ಮಾಸ್ಕ್ ಧರಿಸಿ ಸರಳವಾಗಿ ಮನೆಯಲ್ಲಿಯೇ ಹೊಸ ವರ್ಷ ಆಚರಣೆ ಮಾಡಬೇಕಿದೆ.