ಹಾವೇರಿ: ಇಂದು ಅಕ್ಷಯ ತೃತೀಯ, ಈ ದಿನ ಚಿನ್ನ ಖರೀದಿಸಿದರೆ ಅದು ಅಕ್ಷಯವಾಗುತ್ತೆ ಎಂಬ ನಂಬಿಕೆ ಜನರಲ್ಲಿದೆ. ಆದರೆ ಎರಡು ವರ್ಷಗಳಿಂದ ಕೊರೊನಾ ಭೀತಿ ಅಕ್ಷಯ ತೃತೀಯ ಸಂಭ್ರಮವನ್ನ ಕಸಿದುಕೊಂಡಿದೆ.
ನಗರದಲ್ಲಿ ಕಳೆದ ವರ್ಷ ಕೊರೊನಾ ಮೊದಲ ಅಲೆಯಿಂದ ತತ್ತರಿಸಿದ್ದ ಜನ ಚಿನ್ನ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಈ ವರ್ಷ ಅಕ್ಷಯ ತೃತೀಯಾಗೆ ಎರಡನೇ ಅಲೆ ಸಂಕಷ್ಟ ತಂದೊಡ್ಡಿದೆ. ಪ್ರತಿ ವರ್ಷ ಅಕ್ಷಯ ತೃತೀಯಾ ದಿನದಂದೆ ಜನರು ಬಂಗಾರ ಸೇರಿದಂತೆ ಆಭರಣಗಳ ಖರೀದಿಯಲ್ಲಿ ಮುಗಿಬೀಳುತ್ತಿದ್ದರು. ಇದರಿಂದ ನಗರದಲ್ಲಿ ಈ ದಿನ ಕೋಟ್ಯಾಂತರ ರೂಪಾಯಿ ವ್ಯವಹಾರವಾಗುತ್ತಿತ್ತು.