ಕರ್ನಾಟಕ

karnataka

ETV Bharat / state

ಸಿಂದಗಿ ಮಠದ ಕಜ್ಜಾಯ ಸಂಪ್ರದಾಯದ ಮೇಲೆ ಕೊರೊನಾ ಕರಿನೆರಳು - Cardamom City Haveri

ಕೊರೊನಾ ಕರಿನೆರಳು ಹಾವೇರಿಯ ಸಿಂದಗಿ ಮಠದ ಕಜ್ಜಾಯ ಸಂಪ್ರದಾಯದ ಮೇಲೆ ಮೂಡಿದ್ದು, ಮಠದ ಏಳುದಶಕಗಳ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಕಜ್ಜಾಯ ಮತ್ತು ದಾಸೋಹ ನಿಲ್ಲಿಸಲಾಗಿದೆ.

Corona effect on the Kajjaya tradition of the Sindagi monastery
ಸಿಂದಗಿ ಮಠದ ಕಜ್ಜಾಯ ಸಂಪ್ರದಾಯದ ಮೇಲೆ ಕೊರೊನಾ ಕರಿನೆರಳು

By

Published : Apr 5, 2020, 1:02 PM IST

ಹಾವೇರಿ: ಕೊರೊನಾ ಕರಿನೆರಳು ಹಾವೇರಿಯ ಸಿಂದಗಿ ಮಠದ ಕಜ್ಜಾಯ ಸಂಪ್ರದಾಯದ ಮೇಲೆ ಮೂಡಿದ್ದು, ಮಠದ ಏಳುದಶಕಗಳ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಕಜ್ಜಾಯ ಮತ್ತು ದಾಸೋಹ ನಿಲ್ಲಿಸಲಾಗಿದೆ.

ಸಿಂದಗಿ ಮಠದ ಕಜ್ಜಾಯ ಸಂಪ್ರದಾಯದ ಮೇಲೆ ಕೊರೊನಾ ಕರಿನೆರಳು

ಏಲಕ್ಕಿ ನಗರಿ ಹಾವೇರಿಗೆ ಮರಿಕಲ್ಯಾಣ ಅಥವಾ ಎರಡನೇಯ ಕಲ್ಯಾಣ ಎಂದು ಹೆಸರಿದೆ. ಹಾವೇರಿಗೆ ಈ ಹೆಸರು ಬರಲು ಕಾರಣ ಇಲ್ಲಿ ಇರುವ ಮಠಗಳ ಸಂಖ್ಯೆ. ಹೌದು ಕಲ್ಯಾಣದಲ್ಲಿ 65 ಮಠಗಳಿದ್ದರೇ ಹಾವೇರಿಯಲ್ಲಿ 53 ಮಠಗಳಿವೆ. ಈ ಮಠಗಳಲ್ಲಿ ಪ್ರಮುಖವಾದ ಮಠಗಳಲ್ಲಿ ಒಂದು ಸಿಂದಗಿಮಠ.

ಸಿಂದಗಿ ಶಾಂತವಿರೇಶ್ವರರಿಂದ ಆರಂಭವಾದ ಮಠ ತನ್ನದೇ ಆದ ಕಜ್ಜಾಯ ಸಂಪ್ರದಾಯದಿಂದ ನಾಡಿನ ಗಮನಸೆಳೆದಿದೆ. ಈ ಮಠಕ್ಕೆ ಅಧ್ಯಯನಕ್ಕೆ ಬರುವ ವಟುಗಳು ನಗರದ ಮನೆ ಮನೆಗೆ ತೆರಳಿ ಭಕ್ತರ ನೀಡುವ ಆಹಾರವನ್ನ ಮಠಕ್ಕೆ ತರುತ್ತಾರೆ. ನಂತರ ಈ ರೀತಿ ತಂದ ಆಹಾರವನ್ನ ವಟುಗಳು ಮಠಕ್ಕೆ ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ದಾಸೋಹದ ರೂಪದಲ್ಲಿ ಉಣಬಡಿಸಲಾಗುತ್ತೆ. ಆದರೆ, ಈ ವಿಶಿಷ್ಠ ಪರಂಪರೆಗೆ ಇದೀಗ ಕರೋನಾ ಕರಿಛಾಯೆ ಬಿದ್ದಿದೆ. ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ವಟುಗಳನ್ನು ಸ್ವಗ್ರಾಮಗಳಿಗೆ ಕಳಿಸಲಾಗಿದೆ. ಕಜ್ಜಾಯ ಮತ್ತು ದಾಸೋಹವನ್ನ ಏಪ್ರೀಲ್ 14 ರವರೆಗೆ ನಿಲ್ಲಿಸಲಾಗಿದೆ. ಹೀಗಾಗಿ ಮಠದ ಭಕ್ತರು ಸಹಕರಿಸುವಂತೆ ಮಠದ ಅಡಳಿತಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details