ಹಾವೇರಿ:ಜಿಲ್ಲೆಯಲ್ಲಿ ಪ್ರತಿವರ್ಷ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದ ರಾಮನವಮಿಯನ್ನ ಕೊರೊನಾ ವೈರಸ್ ಭೀತಿಯಿಂದಾಗಿ ಸರಳವಾಗಿ ಆಚರಿಸಲಾಯಿತು.
ರಾಮನವಮಿ ಆಚರಣೆ ಮೇಲೆಯೂ ಕೊರೊನಾ ಕರಾಳ ಛಾಯೆ - Haveri corona panic
ಹಾವೇರಿಯಲ್ಲಿ ಪ್ರತಿವರ್ಷ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದ ರಾಮನವಮಿಯನ್ನ ಕೊರೊನಾ ವೈರಸ್ ಭೀತಿಯಿಂದಾಗಿ ಸರಳವಾಗಿ ಆಚರಿಸಲಾಯಿತು.
![ರಾಮನವಮಿ ಆಚರಣೆ ಮೇಲೆಯೂ ಕೊರೊನಾ ಕರಾಳ ಛಾಯೆ Corona effect on Ramanavami ritual](https://etvbharatimages.akamaized.net/etvbharat/prod-images/768-512-6631203-thumbnail-3x2-chai.jpg)
ರಾಮನವಮಿ ಆಚರಣೆ ಮೇಲೆಯೂ ಕೊರೊನಾ ಕರಾಳ ಛಾಯೆ
ಪ್ರತಿವರ್ಷ ತುಂಬಿತುಳುಕುತ್ತಿದ್ದ ರಾಮಮಂದಿದಲ್ಲಿ ಕೇವಲ ಬೆರಳೆಣಿಕೆಯಷ್ಟು ಭಕ್ತರು ಪಾಲ್ಗೊಂಡಿದ್ದರು. ರಾಮನವಮಿ ಅಂಗವಾಗಿ ಶ್ರೀರಾಮಚಂದ್ರ, ಸೀತಾ, ಲಕ್ಷ್ಣಣ ಮತ್ತು ಆಂಜನೇಯನನ್ನ ವಿಶೇಷವಾಗಿ ಆಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ರಾಮನ ದರ್ಶನ ಪಡೆದರು.