ಹಾವೇರಿ: ಇಲ್ಲಿನ ಕನಕಾಪುರದಲ್ಲಿ ರೈತನೋರ್ವ ಬೆಳೆದಿದ್ದ ಬದನೆಕಾಯಿ ಬೆಳೆಗೆ ಸೂಕ್ತ ಬೆಲೆ ಸಿಗದೇ, ಜಮೀನಿನಲ್ಲಿದ್ದ ಬದನೆಕಾಯಿ ಬೆಳೆಯನ್ನು ಬಡವರು, ಪರಿಚಯದವರು ಕಿತ್ತುಕೊಂಡು ಹೋಗಲು ಬಿಟ್ಟಿದ್ದಾನೆ.
ಇಲ್ಲಿನ ಪ್ರಗತಿಪರ ರೈತರಲ್ಲಿ ಫಕ್ಕೀರಗೌಡ ಗಾಜಿಗೌಡ್ರ ಕೂಡ ಒಬ್ಬರು. ಕಳೆದ ವರ್ಷ ತನ್ನ ಮೂರು ಎಕರೆ ಜಮೀನಿನಲ್ಲಿ ವಿವಿಧ ತರದ ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಬೆಳೆದಿದ್ದ. ಆದರೆ, ಲಾಕ್ಡೌನ್ ಸಾಕಷ್ಟು ಹಾನಿಯನ್ನುಂಟುಮಾಡಿತ್ತು. ಈ ವರ್ಷ ಭರ್ಜರಿಯಾಗಿ ಬದನೆಕಾಯಿ ಬೆಳೆದಿದ್ದಾನೆ, ಆದರೆ ಬದನೆಕಾಯಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ.
ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತನ ಕಣ್ಣೀರು ಜಮೀನಿನಲ್ಲಿರುವ ಬದನೆಕಾಯಿ ಹರಿದುಕೊಂಡು ಮಾರುಕಟ್ಟೆಗೆ ಹೋದರೆ ಒಂದು ಬಾಕ್ಸ್ಗೇ 25 ರೂ. ಕೇಳುತ್ತಿದ್ದಾರೆ. ಹೀಗಾದರೆ ಜಮೀನಿನಿಂದ ಮಾರುಕಟ್ಟೆಗೆ ತಗೆದುಕೊಂಡ ವಾಹನದ ಬಾಡಿಗೆ ಸಹ ಸಿಗುವುದಿಲ್ಲ. ಇದರ ಮೇಲೆ ಕೂಲಿಕಾರ್ಮಿಕರ ಖರ್ಚು, ಗೊಬ್ಬರ ಮತ್ತು ಬಿತ್ತನೆ ಬೀಜದ ಖರ್ಚು ಎಲ್ಲಿಂದ ಸಿಗಲಿದೆ ಎಂದು ಅಳಲು ತೋಡಿಕೊಂಡಿದ್ದಾನೆ.
ಬೆಳೆ ಮಾರುವ ಬದಲು ಬಡವರು, ಪರಿಚಯದವರು ಹರಿದುಕೊಂಡು ಹೋಗಲು ಬಿಟ್ಟಿದ್ದಾನೆ. ಆದರೂ ಸಹ ಗಿಡದಲ್ಲಿ ಬದನೆಕಾಯಿ ಹಾಳಾಗಲಾರಂಭಿಸಿದೆ. ನಮ್ಮ ಪಾಡು ಕೇಳುವರ್ಯಾರು ಎಂದು ಕಣ್ಣೀರಿಡುತ್ತಿದ್ದಾನೆ.