ರಾಣೆಬೆನ್ನೂರು(ಹಾವೇರಿ): ಕೊರೊನಾ ಭೀತಿ ಹಿನ್ನೆಲೆ ಜಿಲ್ಲೆಯ ಗಡಿಭಾಗದಲ್ಲಿ ಹಾಕಲಾಗಿದ್ದ ಚೆಕ್ಪೋಸ್ಟ್ ತೆರವುಗೊಳಿಸಲಾಗಿದೆ. ಚೆಕ್ಪೋಸ್ಟ್ ಸಂಚಾರಮುಕ್ತವಾದ ಕಾರಣ ವಾಹನ ಸವಾರರು ಮತ್ತು ಸಾರ್ವಜನಿಕರು ಖುಷಿ ವ್ಯಕ್ತಪಡಿಸಿದ್ದಾರೆ.
ರಾಣೆಬೆನ್ನೂರು ಕೊರೊನಾ ತಪಾಸಣಾ ಕೇಂದ್ರ ತೆರವುಗೊಳಿಸಿದ ಜಿಲ್ಲಾಡಳಿತ - Corona check post Clearance in Ranebennuru
ಎರಡು ತಿಂಗಳಿಂದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಾಕನೂರ ಕ್ರಾಸ್ ಬಳಿ ಹಾಕಲಾಗಿದ್ದ ಕೊರೊನಾ ತಪಾಸಣೆ ಕೇಂದ್ರವನ್ನು ತಾಲೂಕು ಆಡಳಿತ ತೆರವುಗೊಳಿಸಿದೆ. ಇದು ವಾಹನ ಸವಾರರಿಗೆ ಸಮಾಧಾನ ತಂದಿದೆ.
![ರಾಣೆಬೆನ್ನೂರು ಕೊರೊನಾ ತಪಾಸಣಾ ಕೇಂದ್ರ ತೆರವುಗೊಳಿಸಿದ ಜಿಲ್ಲಾಡಳಿತ Corona check post](https://etvbharatimages.akamaized.net/etvbharat/prod-images/768-512-7369904-96-7369904-1590601580397.jpg)
ಕಳೆದ ಎರಡು ತಿಂಗಳಿಂದ ರಾಣೆಬೆನ್ನೂರು ತಾಲೂಕಿನ ಮಾಕನೂರ ಕ್ರಾಸ್ ಬಳಿ ಹಾಕಲಾಗಿದ್ದ ಕೊರೊನಾ ತಪಾಸಣೆ ಕೇಂದ್ರವನ್ನು ತಾಲೂಕು ಆಡಳಿತ ತೆರವುಗೊಳಿಸಿದೆ. ಇದರಿಂದ ಜಿಲ್ಲೆಯಿಂದ ಅಂತರ್ ಜಿಲ್ಲೆಗೆ ತೆರಳುತ್ತಿದ್ದ ವಾಹನ ಸವಾರರು ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು. ರಾಜ್ಯದಲ್ಲಿ ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ಪ್ರಮುಖವಾಗಿ ಜಿಲ್ಲಾ ಗಡಿಭಾಗದಲ್ಲಿ ಕೊರೊನಾ ತಪಾಸಣೆ ಕೇಂದ್ರ ತೆರೆದಿತ್ತು.
ತಪಾಸಣೆ ಕೇಂದ್ರದಲ್ಲಿ ವಾಹನ ಸವಾರರನ್ನು ನಿಲ್ಲಿಸಿ ಅವರನ್ನು ಕೊರೊನಾ ತಪಾಸಣೆ ಮಾಡಲಾಗುತ್ತಿತ್ತು. ಇದರಿಂದ ನಿತ್ಯವೂ ವಾಹನ ಸವಾರರು ಮಾಕನೂರ ಕ್ರಾಸ್ ಬಂದ ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಬೇಕಿತ್ತು. ಲಾಕ್ಡೌನ್ ಸಡಿಲಗೊಳಿಸಿದ ಕಾರಣ ರಾಜ್ಯ ಸರ್ಕಾರ ಜಿಲ್ಲಾ ಗಡಿ ಭಾಗದ ಕೊರೊನಾ ತಪಾಸಣೆ ಕೇಂದ್ರವನ್ನು ಓಡಾಟಕ್ಕೆ ಮುಕ್ತ ಮಾಡಿದ್ದು ಸಾರ್ವಜನಿಕರಿಗೆ ಮತ್ತು ವಾಹನ ಸವಾರರು ಸಂಚರಿಸಲು ಅವಕಾಶ ನೀಡಿದೆ. ಇದು ವಾಹನ ಸವಾರರಿಗೆ ಸಮಾಧಾನ ತಂದಿದೆ.