ಕರ್ನಾಟಕ

karnataka

ETV Bharat / state

ಕೊರೊನಾ ಹೊಡೆತ : ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕ ರಸ್ತೆಯಲ್ಲಿ ಹಣ್ಣು ಮಾರಾಟ - ಉಪನ್ಯಾಸಕ ರಸ್ತೆಯಲ್ಲಿ ಹಣ್ಣು ಮಾರಾಟ

ಸರ್ಕಾರ ತಮ್ಮ ಬೇಡಿಕೆ ಈಡೇರಿಸುವ ಜೊತೆಗೆ ನೆರವಿನ ಹಸ್ತ ಚಾಚುವಂತೆ ಸಿ.ಕೆ.ಪಾಟೀಲ್ ಒತ್ತಾಯಿಸಿದ್ದಾರೆ. ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ 8ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸಾವನ್ನಪ್ಪಿದ್ದು ಸರ್ಕಾರ ಅವರಿಗೆ ಪರಿಹಾರ ನೀಡುವಂತೆ ಪಾಟೀಲ್ ಆಗ್ರಹಿಸಿದ್ದಾರೆ..

ಅತಿಥಿ ಉಪನ್ಯಾಸಕ
ಅತಿಥಿ ಉಪನ್ಯಾಸಕ

By

Published : May 8, 2021, 10:39 PM IST

ಹಾವೇರಿ : ಸರ್ಕಾರ ಫೆಬ್ರವರಿ 28ರಿಂದ ಅತಿಥಿ ಉಪನ್ಯಾಸಕರನ್ನು ರಿಲೀವ್ ಮಾಡಿದ್ದು, ಸ್ನಾತಕೋತ್ತರ ಪದವಿ, ಪಿಹೆಚ್‌ಡಿ ಸೇರಿದಂತೆ ವಿವಿಧ ಪದವಿ ಪಡೆದಿರುವ ಅತಿಥಿ ಉಪನ್ಯಾಸಕರು ನರೇಗಾ ಸೇರಿದಂತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.

ಹಾವೇರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದ ಸಿ ಕೆ ಪಾಟೀಲ್ ಮಾವಿನಹಣ್ಣು ಮಾರಲು ಮುಂದಾಗಿದ್ದಾರೆ.

ತಮ್ಮ ತೋಟದಲ್ಲಿ ಸಾವಯವವಾಗಿ ಬೆಳೆದ ಮಾವಿನಹಣ್ಣುನ್ನ ಓಮ್ನಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಇದರಿಂದಲೇ ಬದುಕು ಕಟ್ಟಿಕೊಂಡಿದ್ದು ಇದೀಗ ಮಾವಿನಹಣ್ಣಿನ ಸೀಜನ್ ಸಹ ಮುಗಿಯಲು ಬಂದಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕ ರಸ್ತೆಯಲ್ಲಿ ಹಣ್ಣು ಮಾರಾಟ..

ಸರ್ಕಾರ ತಮ್ಮ ಬೇಡಿಕೆ ಈಡೇರಿಸುವ ಜೊತೆಗೆ ನೆರವಿನ ಹಸ್ತ ಚಾಚುವಂತೆ ಸಿ.ಕೆ.ಪಾಟೀಲ್ ಒತ್ತಾಯಿಸಿದ್ದಾರೆ. ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ 8ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸಾವನ್ನಪ್ಪಿದ್ದು ಸರ್ಕಾರ ಅವರಿಗೆ ಪರಿಹಾರ ನೀಡುವಂತೆ ಪಾಟೀಲ್ ಆಗ್ರಹಿಸಿದ್ದಾರೆ.

ABOUT THE AUTHOR

...view details