ರಾಣೆಬೆನ್ನೂರು:ಐದು ವರ್ಷದ ಹೆಣ್ಣು ಮಗುವಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತ ಕುಟುಂಬ ತೀವ್ರ ಆತಂಕಗೊಂಡಿದೆ.
ತಂದೆಯಿಂದಲೇ ಐದು ವರ್ಷದ ಮಗುವಿಗೆ ಕೊರೊನಾ ದೃಢ
ಇಂದು ರಾಣೆಬೆನ್ನೂರಲ್ಲಿ ಐದು ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿದೆ.
Ranebennuru
ಇಲ್ಲಿನ ಮಾರುತಿ ನಗರದ ವ್ಯಕ್ತಿಗೆ ಜೂ.24 ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕುಟುಂಬದ ಎಲ್ಲಾ ಸದಸ್ಯರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ P- 9411 ಪ್ರಾಥಮಿಕ ಸಂಪರ್ಕ ಹೊಂದಿದ್ದ ಐದು ವರ್ಷದ ಹೆಣ್ಣು ಮಗುವಿಗೆ ಇಂದು ಕೊರೊನಾ ಸೋಂಕು ತಗುಲಿದೆ.
ಸದ್ಯ ಸೋಂಕಿತ ವಾಸಿಸುತ್ತಿರುವ ಮಾರುತಿ ನಗರವನ್ನು ಈಗಾಗಲೇ ಕಂಟೈನ್ ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ.