ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನಿರಾಕರಣೆ - ಹಾವೇರಿ ಸುದ್ದಿ

ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಗೆ ಈ ಬಾರಿ ಪರೀಕ್ಷೆ ಬರೆಯುವ ಅವಕಾಶವನ್ನು ನಿರಾಕರಿಸಲಾಗಿದೆ.

Haveri corona
ಹಾವೇರಿ ಕೊರೊನಾ

By

Published : Jun 24, 2020, 12:41 PM IST

ಹಾವೇರಿ: ಶಿಗ್ಗಾಂವಿ ಪಟ್ಟಣದ ಗೌಡರ ಓಣಿ ನಿವಾಸಿಯಾಗಿರುವ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಗೆ ಈಗ ಪರೀಕ್ಷೆ ಬರೆಯುವ ಅವಕಾಶವನ್ನು ನಿರಾಕರಿಸಲಾಗಿದೆ.

ಹಾವೇರಿ ಕೊರೊನಾ

15 ವರ್ಷದ ರೋಗಿ ಸಂಖ್ಯೆ 8,644 ಆಗಿರುವ ವಿದ್ಯಾರ್ಥಿನಿಯಲ್ಲಿ ಜೂನ್​ 20ರಂದು ಸೋಂಕು ದೃಢಪಟ್ಟಿತ್ತು. ರೋಗಿ ಸಂಖ್ಯೆ 6,832ರ ಸಂಪರ್ಕದಿಂದ ಸೋಂಕು ಹರಡಿತ್ತು ಎನ್ನಲಾಗಿದೆ.

ಸದ್ಯಕ್ಕೆ ಹಾವೇರಿಯ ಕೋವಿಡ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೂರಕ ಪರೀಕ್ಷೆಯ ವೇಳೆ ಈಕೆಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದ್ದು, ಪ್ರಥಮ ಅವಕಾಶವೆಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ.

ABOUT THE AUTHOR

...view details