ಹಾವೇರಿ: ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿರುವ ಈಜುಕೊಳ ಕಾರ್ಯಾರಂಭಗೊಂಡಿದೆ. ಆದ್ರೆ, ಇಲ್ಲಿಗೆ ಆಗಮಿಸುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಗುತ್ತಿಗೆದಾರರಿಗೆ ನಿರ್ವಹಣೆ ಕಷ್ಟವಾಗುತ್ತಿದೆ.
ಉದ್ಘಾಟನೆಯಾಗಿ ದಶಕ ಕಳೆದಿರುವ ಈಜುಗೊಳ ಆರಂಭದಲ್ಲಿ ಹಲವು ತೊಡಕುಗಳನ್ನು ಎದುರಿಸಿತ್ತು. ಸ್ವಚ್ಛತೆ, ಫಿಲ್ಟರ್, ನೀರಿನ ಸಮಸ್ಯೆ ಸೇರಿದಂತೆ ಅನೇಕ ಕಾರಣಗಳಿಂದ ಮುಚ್ಚಿ ಹೋಗಿತ್ತು. ಯುವಜನ ಮತ್ತು ಕ್ರೀಡಾ ಇಲಾಖೆಯ ಸುಪರ್ದಿಯಲ್ಲಿದ್ದ ಕೊಳ ಸರಿಯಾಗಿ ನಿರ್ವಹಣೆಯಾಗದ ಹಿನ್ನೆಲೆಯಲ್ಲಿ ಕೀರ್ತಿ ಎಂಟರ್‌ಪ್ರೈಸಸ್ ಎಂಬ ಕಂಪನಿಗೆ ಜಿಲ್ಲಾಡಳಿತ ಗುತ್ತಿಗೆ ನೀಡಿತ್ತು. ಕಂಪನಿಗೆ ಗುತ್ತಿಗೆ ನೀಡಿದ ಬಳಿಕ ಕೋವಿಡ್ ಹಾವಳಿ ಪ್ರಾರಂಭವಾಯಿತು. ಬಳಿಕ ಅತಿಯಾದ ಮಳೆಯಿಂದ ಕಾರ್ಯಾರಂಭವಾಗಲಿಲ್ಲ. ಇದೀಗ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಂಡು ಮತ್ತೆ ಪುನಾರಂಭವಾಗಿದ್ದು, ಗುತ್ತಿಗೆದಾರರಿಗೆ ನಷ್ಟವುಂಟಾಗಿದೆ.