ಕರ್ನಾಟಕ

karnataka

ETV Bharat / state

ವೃತ್ತಿಯಲ್ಲಿ ಕಾನ್ಸ್​​ಟೇಬಲ್​, ಹವ್ಯಾಸದಲ್ಲಿ ಉರಗ ಪ್ರೇಮಿ - Reptile lover in hobby

ರಮೇಶ್​ ಎಂಬವರು ವೃತ್ತಿಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಾನ್ಸ್​ಟೇಬಲ್​​ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೂ ಸುಮಾರು 8 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ರಕ್ಷಿಸಿದ್ದಾರೆ.

constable-by-profession-reptile-lover-by-hobby
ವೃತ್ತಿಯಲ್ಲಿ ಕಾನ್ಸ್ಟೇಬಲ್​​, ಹವ್ಯಾಸದಲ್ಲಿ ಉರಗ ಪ್ರೇಮಿ

By

Published : Jun 1, 2023, 10:29 PM IST

Updated : Jun 2, 2023, 8:10 AM IST

ವೃತ್ತಿಯಲ್ಲಿ ಕಾನ್ಸ್​​ಟೇಬಲ್​, ಹವ್ಯಾಸದಲ್ಲಿ ಉರಗ ಪ್ರೇಮಿ

ಹಾವೇರಿ:ಹಾವುಗಳನ್ನು ಕಂಡರೇ ಭಯಪಟ್ಟು ಓಡುವ ಜನರ ಮಧ್ಯೆ, ಉರಗಗಳ ರಕ್ಷಣೆಯೇ ತಮ್ಮ ಹವ್ಯಾಸವಾಗಿಸಿಕೊಂಡಿರುವ ರಮೇಶ್​ ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಾನ್ಸ್​ಟೇಬಲ್​ ​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟಿದ್ದಾರೆ.

ತಮ್ಮ ಕರ್ತವ್ಯದ ನಡುವೆ ಉರಗಗಳ ರಕ್ಷಣೆಯಲ್ಲಿರುವ ರಮೇಶ್​ ಹಾವೇರಿ ನಗರ ಅಥವಾ ಸುತ್ತಮುತ್ತಲ ಗ್ರಾಮಗಳಲ್ಲಿ ಯಾರ ಮನೆಯಲ್ಲಾದರೂ ಹಾವು ಕಾಣಿಸಿಕೊಂಡು ದೂರವಾಣಿ ಕರೆ ಮಾಡಿದರೆ ಅಲ್ಲಿಗೇ ತಕ್ಷಣವೇ ಭೇಟಿ ಕೊಟ್ಟು ಹಾವನ್ನು ರಕ್ಷಿಸುವುದು ಇವರ ಹವ್ಯಾಸಗಳಲ್ಲೊಂದು. ನಾಗರಹಾವು ಕೆರೆಹಾವು ಸೇರಿದಂತೆ ವಿವಿಧ ಜಾತಿಯ ಹಾವುಗಳನ್ನ ಹಿಡಿದಿರುವ ಇವರು ಇಲ್ಲಿಯವರೆಗೂ ಸುಮಾರು 8,500ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿದ್ದಾರೆ.

ತಮ್ಮ ಕರ್ತವ್ಯ ಜೊತೆ ಜೊತೆಗೆ ಹಾವುಗಳನ್ನು ರಕ್ಷಿಸುವುದಲ್ಲದೇ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪರಿಸರ ಸಮತೋಲನದಲ್ಲಿ ಹಾವುಗಳ ಪಾತ್ರ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಸಹ ಮಾಡುತ್ತಾರೆ. ಪರಿಸರ ಸಮತೋಲನದಲ್ಲಿ ಉರಗಗಳು ಪಾತ್ರ ಮಹತ್ವದಾಗಿದ್ದು. ಹಾವುಗಳನ್ನು ಕಂಡರೇ ಭಯಗೊಳ್ಳದೆ ಅವುಗಳಿಗೆ ಹಾನಿಮಾಡಬೇಡಿ ಎಂದು ಜಾಗೃತಿಯನ್ನು ಮೂಡಿಸುತ್ತಾರೆ. ಕೆಲವೊಮ್ಮ ಹಾವಿನ ಮೊಟ್ಟೆಗಳು ಸಿಕ್ಕರೆ ಅವುಗಳನ್ನು ತಂದು ಕೃತಕ ಬಿಸಿಯಲ್ಲಿ ಮರಿ ಮಾಡಿದ ಪ್ರಯೋಗಗಳನ್ನ ಸಹ ರಮೇಶ್ ಮಾಡಿದ್ದಾರೆ.

ಉರಗ ಪ್ರೇಮಿ ರಮೇಶ್ ಮಾತನಾಡಿ, ಉರಗಗಳ ರಕ್ಷಣೆಗೆ ಹೋದಾಗ ಅವುಗಳು ನಮ್ಮ ಮೇಲೆ ದಾಳಿ ಮಾಡುತ್ತವೆ. ನಾವು ನಮ್ಮ ಎಚ್ಚರಿಕೆಯಲ್ಲಿರಬೇಕು. ಹಾವು ಕಚ್ಚಿದಾಗ ನಿರ್ಲಕ್ಷ್ಯ ಮಾಡದೇ ಪ್ರಾಥಮಿಕ ಚಿಕಿತ್ಸೆ ಪಡೆದು ಹತ್ತಿರದ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ಹಾವುಗಳ ಜೊತೆ ನಿರ್ಲಕ್ಷ್ಯ ವಹಿಸಬಾರದು. ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಹ ಕಡಿಮೆಯೇ ಈಗಾಗಿ ಉರಗಗಳನ್ನ ಹಿಡಿಯುವ ಮೈಯಲ್ಲಾ ಕಣ್ಣಾಗಿರಬೇಕು ಮತ್ತು ಹಾವುಗಳನ್ನು ಹಿಡಿದ ತಕ್ಷಣವೇ ಕಾಡಿಗೆ ಬಿಟ್ಟು ಬರಬೇಕು ಎಂದು ಹೇಳಿದರು. ಇತ್ತಿಚೀಗೆ ಉರಗಪ್ರೇಮಿಗಳು ಹಾವು ಕಡಿಸಿಕೊಂಡು ಮೃತಪಟ್ಟ ವಿಷಯಗಳನ್ನು ತಿಳಿದಾಗ ತುಂಬಾ ನೋವಾಗುತ್ತದ ಎಂದು ಬೇಸರ ವ್ಯಕ್ತಪಡಿಸಿದರು.

ನಾಗರಹಾವು ಕಚ್ಚಿಸಿಕೊಂಡು ಸ್ನೇಕ್​ ನರೇಶ್​ ಸಾವು:ರಾಜ್ಯದ ಹೆಸರಾಂತ ಉರಗ ತಜ್ಞರಲ್ಲಿ ಒಬ್ಬರಾಗಿದ್ದ ಸ್ನೇಕ್ ನರೇಶ್ (51) ಸ್ವತಃ ತಾವೇ ಹಿಡಿದಿದ್ದ ನಾಗರ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಸಮೀಪ ನಾಗರ ಹಾವೊಂದನ್ನು ಸೆರೆ ಹಿಡಿದಿದ್ದ ನರೇಶ್ ಹಾವನ್ನು ಚೀಲದಲ್ಲಿ ತುಂಬಿ ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟಿದ್ದರು. ಅದಾದ ಮೇಲೆ ಮತ್ತೊಂದು ಹಾವು ಹಿಡಿಯಲು ಕರೆ ಬಂದಿತ್ತು. ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟಿದ್ದ ಹಾವಿನ ಚೀಲವನ್ನು ಬಿಗಿಯಾಗಿ ಕಟ್ಟಲು ಎಂದು ಸ್ಕೂಟಿಯ ಡಿಕ್ಕಿ ಓಪನ್ ಮಾಡಿದಾಗ ಚೀಲದಿಂದ ಹೊರ ಬಂದಿದ್ದ ನಾಗರಹಾವು ನರೇಶ್ ಅವರಿಗೆ ಕಚ್ಚಿದ್ದು ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳುವಷ್ಟರಲ್ಲಿ ಸಾವನ್ನಪ್ಪಿದ್ದರು.

ಇದನ್ನೂ ಓದಿ:25 ಸಾವಿರಕ್ಕೂ ಹೆಚ್ಚು ಹಾವು ರಕ್ಷಿಸಿದ ಸುರೇಶ್ ಸಾವನ್ನಪ್ಪಿದ್ದು ಹೇಗೆ? ಕಂಪ್ಲೀಟ್‌ ಡಿಟೇಲ್ಸ್‌

Last Updated : Jun 2, 2023, 8:10 AM IST

ABOUT THE AUTHOR

...view details