ಹಾವೇರಿ :ಜಿಲ್ಲೆಯ ಹಾನಗಲ್‌ಗೆ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ನಗರದ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ರಾಹುಲ್ ಭಾಷಣ ಮಾಡಲಿದ್ದಾರೆ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಸೋಮವಾರ್ ರಾಹುಲ್ ಗಾಂಧಿ ನಡೆಸಲಿರುವ ಬೃಹತ್ ಸಮಾವೇಶದ ಪೂರ್ವಸಿದ್ಧತೆಯನ್ನ ವೀಕ್ಷಿಸಿ ಅವರು ಮಾತನಾಡುತ್ತಿದ್ದರು.
ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ : ದೂರು ದಾಖಲು
ಸೋಮವಾರ ಸಂಜೆ ಐದು ಗಂಟೆಗೆ ರಾಹುಲ್ ಗಾಂಧಿ ಹೆಲಿಕಾಪ್ಟರ್ ಮೂಲಕ ಹಾನಗಲ್‌ಗೆ ಆಗಮಿಸಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶ್ರೀನಿವಾಸ ಮಾನೆ ತಿಳಿಸಿದರು. ಇದೇ ವೇಳೆ ಸಮಾವೇಶದಲ್ಲಿ ರಾಹುಲ್ ಗಾಂಧಿ ಜೊತೆ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಪ್ರಮುಖರು ಸಹ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಸಮಾವೇಶದಲ್ಲಿ ಪಾಲ್ಗೊಳ್ಳಬಹುದು ಎಂದು ಶ್ರೀನಿವಾಸ ಮಾನೆ ತಿಳಿಸಿದರು.
ಇದನ್ನೂ ಓದಿ:ಕೈ ಕಮಲ ಕಲಿಗಳಿಂದ ಅದ್ಧೂರಿ ಪ್ರಚಾರ, ಜಗಳೂರಿನಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ
ಯಾವ ಹಬ್ಬಕ್ಕೂ ಕಡಿಮೆ ಇಲ್ಲ :ಇದೊಂದು ಐತಿಹಾಸಿಕ ಸಮಾವೇಶವಾಗಲಿದೆ. ಯುವಕರನ್ನು ರಾಜಕೀಯದಲ್ಲಿ ತರಲು ಅವರಿಗೆ ಹುಮ್ಮಸ್ಸು ತುಂಬಲು ರಾಹುಲ್ ಹಾನಗಲ್‌ಗೆ ಆಗಮಿಸಲಿದ್ದಾರೆ. ರಾಹುಲ್ ಗಾಂಧಿ ಯುವಕರಿಗೆ ಒಂದು ದೊಡ್ಡ ಶಕ್ತಿ. ಭಾರತ್ ಜೋಡೋ ಮುಗಿಸಿಕೊಂಡು ಭಾವೈಕ್ಯತೆ ಸಾರಿರುವ ಅವರು ನಮ್ಮ ಊರಿಗೆ ಬರುತ್ತಿರುವುದು ಯಾವ ಹಬ್ಬಕ್ಕೂ ಕಡಿಮೆ ಇಲ್ಲ ಎಂದು ಮಾನೆ ತಿಳಿಸಿದರು.