ಕರ್ನಾಟಕ

karnataka

ETV Bharat / state

ಹಾನಗಲ್​ನಲ್ಲಿ ಕಾಂಗ್ರೆಸ್​​ಗೆ ಗೆಲುವಿನ ಹುಗ್ಗಿ.. ಸಿಎಂ ತವರಲ್ಲೇ ಬಿಜೆಪಿಗೆ ಮುಖಭಂಗ..

ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಯುವಪಡೆ ವಿಜಯಲಕ್ಷ್ಮಿ ತಮ್ಮ ಕಡೆ ಒಲೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಬಿಜೆಪಿ ಹಾನಗಲ್ ಕ್ಷೇತ್ರ ಕಳೆದುಕೊಂಡಿದೆ. ಆದರೆ, ಈ ಸೋಲಿನ ಹೊಣೆಯನ್ನು ನೇರವಾಗಿ ತಾನೆ ಹೊರುವುದಾಗಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ತಿಳಿಸಿದ್ದಾರೆ..

congress wins in Hangal by poll
ಕಾಂಗ್ರೆಸ್​​ಗೆ ಗೆಲುವು

By

Published : Nov 2, 2021, 7:37 PM IST

Updated : Nov 2, 2021, 7:49 PM IST

ಹಾವೇರಿ :ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತೀವ್ರ ಪ್ರತಿಷ್ಠೆಯಾಗಿದ್ದ ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್​​ ಪಾಲಾಗಿದೆ. ಮಾಜಿ ಸಚಿವ ಸಿಎಂ ಉದಾಸಿ ನಿಧನ ಹಿನ್ನೆಲೆ ನಡೆದ ಉಪಚುನಾವಣೆಯಲ್ಲಿ ಇಲ್ಲಿಯ ಮತದಾರ ಕಮಲ ಬಿಟ್ಟು 'ಕೈ'ಹಿಡಿದಿದ್ದಾನೆ.

ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್​​ವೈ ಮತಬೇಟೆ ಜೊತೆಗೆ ಹಲವು ಸಚಿವರು, ಸಂಸದ ಶಿವಕುಮಾರ್ ಉದಾಸಿಗೆ ಇಲ್ಲಿಯ ಮತದಾರ ಮಣೆ ಹಾಕಿಲ್ಲ.

ಬದಲಿಗೆ ಕೊರೊನಾ ಸಮಯದಲ್ಲಿ ಕ್ಷೇತ್ರದಲ್ಲಿ ಶ್ರೀನಿವಾಸ ಮಾನೆಯ ಜನಪರ ಕಾಳಜಿ, ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಪಂಚಿಂಗ್ ಡೈಲಾಗ್, ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆ ಇಲ್ಲಿಯ ಮತದಾರರು ಜೈಕಾರ ಹಾಕಿದ್ದಾರೆ.

ಆ ಮೂಲಕ ಬಿಜೆಪಿ ತನ್ನ ಭದ್ರಕೋಟಿಯನ್ನ ಕೈ ಪಾಳೆಯಕ್ಕೆ ಬಿಟ್ಟುಕೊಟ್ಟಾಂತಾಗಿದೆ. ಕ್ಷೇತ್ರದ ಆರು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನ ಬಿಜೆಪಿ ಕಳೆದುಕೊಂಡಿದೆ.

ಹಾನಗಲ್​ನಲ್ಲಿ ಕಾಂಗ್ರೆಸ್​​ಗೆ ಗೆಲುವು.. ಮಾನೆಗೆ ಮನ್ನಣೆ ಕೊಟ್ಟ ಮತದಾರ ಪ್ರಭುಗಳು..

ಸಿಎಂ ಬಸವರಾಜ್ ಬೊಮ್ಮಾಯಿಗೆ ತೀವ್ರ ಪ್ರತಿಷ್ಠೆಯಾಗಿದ್ದ ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಆ ಮೂಲಕ ಆಡಳಿತರೂಢ ಬಿಜಿಪಿಗೆ ಇಲ್ಲಿಯ ಮತದಾರರು ತೀವ್ರ ಮುಖಭಂಗ ಮಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ತಮ್ಮ ಪ್ರತಿಸ್ಪರ್ಧೆ ಬಿಜೆಪಿಯ ಶಿವರಾಜ್ ಸಜ್ಜನರ್ ವಿರುದ್ಧ 7373 ಮತಗಳಿಂದ ಜಯ ಸಾಧಿಸಿದ್ದಾರೆ. ಶ್ರೀನಿವಾಸ್ ಮಾನೆ 87,490 ಮತ ಪಡೆದರೆ ಬಿಜೆಪಿಯ ಶಿವರಾಜ್ ಸಜ್ಜನರ್ 80,117 ಮತಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ 927 ಮತ ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಸಿಎಂ ತವರು ಜಿಲ್ಲೆಯಲ್ಲೇ ಬಿಜೆಪಿಗೆ ಸೋಲು: ಬೊಮ್ಮಾಯಿ ಬೆನ್ನಿಗೆ ನಿಂತ ಬಿಎಸ್‌ವೈ ಮತ್ತವರ ತಂಡ

ಆಡಳಿತರೂಢ ಬಿಜೆಪಿ ಸಚಿವರ ಠಿಕಾಣಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ಅಬ್ಬರದ ಪ್ರಚಾರಕ್ಕೆ ಇಲ್ಲಿಯ ಮತದಾರ ಕ್ಯಾರೇ ಎಂದಿಲ್ಲ. ಕೊರೊನಾ ಸಮಯದಲ್ಲಿ ಜನರ ಸಮಸ್ಯೆ ಆಲಿಸಿದ್ದು ಕಾಂಗ್ರೆಸ್ ಪ್ಲಸ್. ಆದರೆ, ಈ ಸಮಯದಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ನಾಯಕರು ಇಲ್ಲದಿರುವುದು ಬಿಜೆಪಿಗೆ ಮೈನಸ್ ಆಗಿದೆ.

ಇನ್ನು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಯುವಪಡೆ ವಿಜಯಲಕ್ಷ್ಮಿ ತಮ್ಮ ಕಡೆ ಒಲೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಬಿಜೆಪಿ ಹಾನಗಲ್ ಕ್ಷೇತ್ರ ಕಳೆದುಕೊಂಡಿದೆ. ಆದರೆ, ಈ ಸೋಲಿನ ಹೊಣೆಯನ್ನು ನೇರವಾಗಿ ತಾನೆ ಹೊರುವುದಾಗಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ತಿಳಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ಅವರು, ಟಿಕೆಟ್ ಪ್ರಕಟವಾಗುವಲ್ಲಿ ಲೇಟಾಗಿದ್ದು ಮತ್ತು ಓವರ್ ಕಾನ್ಪಿಡೆನ್ಸ್ ನನ್ನ ಸೋಲಿಗೆ ಕಾರಣವಾಗಿರಬಹುದು. ನಮ್ಮ ನಾಯಕರು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. ಸಹಕಾರ ಕೊರತೆಯಿಂದ ಸೋಲು ಆಗಿರಬಹುದು.

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರ ನಮ್ಮದೆ ಇದೆ. ಹಾನಗಲ್ ಕ್ಷೇತ್ರದಲ್ಲಿದ್ದು ಅಭಿವೃದ್ಧಿಗೆ ಶ್ರಮಿಸುವುದಾಗಿ ಶಿವರಾಜ್ ಸಜ್ಜನರ್ ತಿಳಿಸಿದ್ದಾರೆ.

ಇದನ್ನೂ ಓದಿ:ಸೋನಿಯಾಗೆ ಪತ್ರ ಬರೆದು ಕಾಂಗ್ರೆಸ್‌ಗೆ ಅಮರೀಂದರ್‌ ಸಿಂಗ್‌ ಗುಡ್‌ ಬೈ; ಹೊಸ ಪಕ್ಷದ ಹೆಸರು ಘೋಷಣೆ

ಬಿಜೆಪಿ ಆರಂಭದಲ್ಲಿ ನಡೆಸಿದ ಹಾನಗಲ್ ಸಮಾವೇಶ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿತ್ತು. ಆದರೆ, ಕಾಂಗ್ರೆಸ್ ಕೊನೆಯ ಸಮಾವೇಶವನ್ನ ಹಾನಗಲ್‌ನಲ್ಲಿ ಅಚ್ಚುಕಟ್ಟಾಗಿ ನಡೆಸುವ ಮೂಲಕ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಶಿವರಾಜ್ ಸಜ್ಜನರ್ ವಿರುದ್ಧ ಕೇಸ್‌ಗಳು,ಕೌಟುಂಬಿಕ ಕಲಹವನ್ನು ಕಾಂಗ್ರೆಸ್ ಚುನಾವಣೆಯಲ್ಲಿ ಬಳಸಿಕೊಂಡಿದ್ದು ಬಿಜೆಪಿ ಹಿನ್ನೆಡೆಗೆ ಕಾರಣವಾಗಿದೆ. ಒಟ್ಟಾರೆ ಹಾನಗಲ್ ಶಾಸಕ ಮಾಜಿ ಸಚಿವ ಸಿ.ಎಂ.ಉದಾಸಿ ನಿಧನದಿಂದ ತೆರವಾದ ಶಾಸಕ ಸ್ಥಾನ ಕಮಲ ಪಾಳೆಯದಿಂದ ಕೈ ಪಾಳೆಯಕ್ಕೆ ಬಂದಂತಾಗಿದೆ.

Last Updated : Nov 2, 2021, 7:49 PM IST

ABOUT THE AUTHOR

...view details