ಹಾವೇರಿ: ಕೋವಿಡ್ ಸಮಯದಲ್ಲಿ ಬಿಜೆಪಿ ಸರ್ಕಾರ ಜನರನ್ನು ಕೆರಳಿಸಿದೆ. ಆಸ್ಪತ್ರೆಯಲ್ಲಿ ಜನರನ್ನು ಕ್ಯೂ ನಿಲ್ಲಿಸಿದೆ. ಶವ ಸುಡಲು ಕ್ಯೂ ನಿಲ್ಲಿಸಿದ್ದರು. ಯುವಕರು ಉದ್ಯೋಗವಿಲ್ಲದೆ ಬೀದಿಗೆ ಬಂದು ನಿಂತಿದ್ದಾರೆ. ಸಿಲಿಂಡರ್ ಬೆಲೆ ದಿನೇ ದಿನೆ ಹೆಚ್ಚಾಗ್ತಿರೋದ್ರಿಂದ ಮಹಿಳೆಯರು ಸಹ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಹಾನಗಲ್‌ನ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲು ಬಂದಿದ್ದ ಡಿಕೆಶಿ, ಅಕ್ಟೋಬರ್ 30 ರಂದು ಮತದಾರರು ಕಾಂಗ್ರೆಸ್ ಗೆಲ್ಲಿಸುವ ಮೂಲಕ ಬಿಜೆಪಿ ಸರ್ಕಾರಕ್ಕೆ ಉತ್ತರ ಕೊಡಲಿದ್ದಾರೆ ಎಂದರು.