ಹಾವೇರಿ :ಬಿಜೆಪಿಯವರು ರೆಸಾರ್ಟ್ಗೆ ಹೋಗಲು ಸಿದ್ದತೆ ನಡೆಸುತ್ತಿದ್ದಾರೆ ಎಂಬ ಪ್ರತಿಪಕ್ಷದವರ ಟೀಕೆಯ ಬಗ್ಗೆ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕಾಂಗ್ರೆಸ್‌ನವರು ರೆಸಾರ್ಟ್ ರಾಜಕೀಯದ ಬಗ್ಗೆ ಮಾತನಾಡಿರುವುದು ಹಾಸ್ಯಾಸ್ಪದ ಎಂದರು. ಹಿರೇಕೆರೂರಿನ ಸ್ವಗೃಹದಲ್ಲಿ ಗುರುವಾರ ಮಾತನಾಡಿದ ಅವರು, ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎನ್ನುವಂತೆ ಅವರು ಸಿಎಂ ಹುದ್ದೆಗೆ ಬಡಿದಾಡಿದವರು ಎಂದರು.
ದಾಂಡೇಲಿಯಲ್ಲಿ ಮಾತ್ರ ರೆಸಾರ್ಟ್ ಇದೆಯೇ. ಈ ಬಾರಿ ಬಸ್‌ನಲ್ಲಿ ಹೋಗುತ್ತಾರೆ ಎಂಬ ಕೀಳು ಆರೋಪ ಯಾಕೆ? ಹೋಗುವುದಾದರೆ ಕಾರ್, ವಿಮಾನದಲ್ಲಿ ಹೋಗುತ್ತಾರೆ. ಅಷ್ಟಕ್ಕೂ ಈ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಅಭಿವೃದ್ದಿ ಕಾರ್ಯಗಳು ನನ್ನ ಕೈ ಹಿಡಿಯುತ್ತವೆ. 13 ರಂದು ಫಲಿತಾಂಶ ಬರಲಿದ್ದು ಬಿಜೆಪಿ ಸರ್ಕಾರ ರಚಿಸಲಿದೆಎಂದು ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ :2023ರ ಎಕ್ಸಿಟ್ ಪೋಲ್ಸ್ ರಾಜಕೀಯ ಭವಿಷ್ಯ ನಿಜವಾಗುತ್ತಾ? 2018ರಲ್ಲಿ ಸಮೀಕ್ಷೆಗಳು ಏನ್ ಹೇಳಿದ್ದವು?
ಹೆಚ್.ಡಿ.ಕುಮಾರಸ್ವಾಮಿ ಮನೆಗೆ ಹೋಗುವ ಪ್ರಸಂಗ ಬರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಕಾದು ನೋಡಿ ಗೊತ್ತಾಗುತ್ತೆ ಎಂದರು. ಎಕ್ಸಿಟ್ ಪೋಲ್ ನಿರ್ಧಾರ ಮಾಡುವವರು ಎಕ್ಸಿಟ್ ಪೋಲ್ ಮಾಡಿದವರಲ್ಲ. ಅದನ್ನು ಮಾಡುವವರು ಮತದಾರರು. ಅಂತಿಮ ನಿರ್ಧಾರ ಅವರದ್ದೇ ಎಂದು ಪಾಟೀಲ್ ಹೇಳಿದರು.