ಹಾವೇರಿ:ತಮ್ಮ ತಂದೆಗೆ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿ ಮೋಸ ಮಾಡಿದೆ. ಪಕ್ಷದ ವರ್ತನೆಯಿಂದ ಬೇಸತ್ತು ತಮ್ಮ ತಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಶಾಸಕ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಅಸಮಾಧಾನ ತೋಡಿಕೊಂಡರು.
ಪಕ್ಷದ ವರ್ತನೆಯೇ ನನ್ನ ತಂದೆಯ ರಾಜೀನಾಮೆಗೆ ಕಾರಣ: ಸೃಷ್ಟಿ ಪಾಟೀಲ್
ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿ ಮೋಸ ಮಾಡಿದೆ. ಪಕ್ಷದ ವರ್ತನೆಯಿಂದಾಗಿ ನಮ್ಮ ತಂದೆ ಬೇಸತ್ತು ಕ್ಷೇತ್ರದ ಜನತೆ ಜೊತೆ ಚರ್ಚಿಸಿ ರಾಜೀನಾಮೆ ತೀರ್ಮಾನ ಕೈಗೊಂಡಿದ್ದಾರೆ ಎಂದು ಶಾಸಕ ಬಿ.ಸಿ.ಪಾಟೀಲ್ ಪುತ್ರಿ ಅಸಮಾಧಾನ ಹೊರ ಹಾಕಿದ್ರು.
ಜಿಲ್ಲೆಯ ಹಿರೇಕೆರಿನಲ್ಲಿ ಮಾತನಾಡಿದ ಅವರು ಪಕ್ಷದ ವರ್ತನೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು ಕಾಂಗ್ರೆಸ್ ಪಕ್ಷದ ವಿರೋಧಿಯಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಈಗಲೂ ಸಹ ಬಿ.ಸಿ.ಪಾಟೀಲ್ ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂಬ ನಿಲುವು ತಾಳಿದ್ದಾರೆ ಅವರ ನಿಲುವಿಗೆ ತಮ್ಮ ಬೆಂಬಲವಿದೆ ಎಂದು ಸೃಷ್ಟಿ ಪಾಟೀಲ್ ತಿಳಿಸಿದರು.
ತಮ್ಮ ತಂದೆ ಚುನಾವಣಾ ಆಯೋಗದ ಕಾನೂನಿನಂತೆ ಮರುಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಸೃಷ್ಠಿ ತಿಳಿಸಿದರು. ನಮ್ಮ ತಂದೆ ರಾಜೀನಾಮೆ ನಿರ್ಧಾರವನ್ನ ವೈಯಕ್ತಿಕವಾಗಿ ತಗೆದುಕೊಂಡಿಲ್ಲ. ಕ್ಷೇತ್ರದ ಜನತೆ ಜೊತೆ ಚರ್ಚಿಸಿ ಅವರು ರಾಜೀನಾಮೆ ತೀರ್ಮಾನ ಕೈಗೊಂಡಿದ್ದಾರೆ. ನಿಮ್ಮ ತಂದೆಗೆ ಸ್ಪರ್ಧಿಸಲಾಗದಿದ್ದರೇ ನೀವು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೃಷ್ಟಿ ಅವರೇ ಸ್ಪ್ರರ್ಧಿಸುತ್ತಾರೆ ಅದನ್ನೆಲ್ಲಾ ಮುಂದೆ ನೋಡೋಣ ಎಂದು ಜಾರಿಗೊಂಡರು.