ಹಾವೇರಿ:ಕಾಂಗ್ರೆಸ್ ಸಾಯುತ್ತಿರುವ ಪಕ್ಷ, ಅದಕ್ಕೆ ಭವಿಷ್ಯವಿಲ್ಲ ಎಂಬ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಓಬಿಸಿ ಮೋರ್ಚಾ ಅಧ್ಯಕ್ಷ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಾಯುತ್ತಿರುವ ಪಕ್ಷವಾದರೆ ಬಿಜೆಪಿ ಬದುಕಿದ್ದರೂ ಸತ್ತು ಹೋಗಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ಅವರ ಯಾವ ನಾಯಕರೂ ಸಂಪೂರ್ಣ ಬಹುಮತದಿಂದ ಮುಖ್ಯಮಂತ್ರಿಯಾಗಿಲ್ಲ. ವ್ಯಾವಹಾರಿಕವಾಗಿ ಅಧಿಕಾರಕ್ಕೆ ಬಂದಿದ್ದಾರೆ ಎಂದರು.
ಬಿಜೆಪಿ ಬದುಕಿದ್ದರೂ ಸತ್ತು ಹೋಗಿದೆ: ಮಧು ಬಂಗಾರಪ್ಪ - ಸಚಿವ ಆನಂದ್ ಸಿಂಗ್
ಕಾಂಗ್ರೆಸ್ ಸಾಯುತ್ತಿರುವ ಪಕ್ಷವೆಂದು ಅವರು ಹೇಳಿದ್ರೆ, ಬಿಜೆಪಿ ಬದುಕಿದ್ದರೂ ಸತ್ತು ಹೋಗಿದೆ ಎಂದು ಕಾಂಗ್ರೆಸ್ ಓಬಿಸಿ ಮೋರ್ಚಾ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಮಧು ಬಂಗಾರಪ್ಪ
ಚುನಾವಣೆ ಬರುತ್ತಿದ್ದಂತೆ ಇನ್ನೂ ಹೆಚ್ಚು ಭಾವನಾತ್ಮಕ ವಿಚಾರಗಳನ್ನಿಟ್ಟುಕೊಂಡು ಚುನಾವಣೆಗೆ ಹೋಗುತ್ತಾರೆ. ಆದರೆ ಈ ಬಾರಿ ಜನರು ಭಾವನೆಗಳನ್ನು ನೋಡಿಕೊಂಡು ಮತ ಹಾಕುವುದಿಲ್ಲ. ದೇಶ ಮತ್ತು ರಾಜ್ಯದಲ್ಲಿನ ಮತದಾರರು ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ. ಇದು ಅವರು ಜನರ ಬಳಿ ಹೋದಾಗ ಗೊತ್ತಾಗುತ್ತೆ ಎಂದು ಮಧು ಬಂಗಾರಪ್ಪ ಹೇಳಿದರು.
ಓದಿ:ಬಿಜೆಪಿಯವರು ಜಾತಿ ಧರ್ಮ ಒಡೆದರು, ಇದೀಗ ರೈತರನ್ನೂ ಒಡೆಯುತ್ತಿದ್ದಾರೆ: ಮಧು ಬಂಗಾರಪ್ಪ