ಕರ್ನಾಟಕ

karnataka

ETV Bharat / state

'ಕೌರವ'ವನ ಮಣಿಸಲು ಹಿರೇಕೆರೂರಿನಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಕೈ ಪಡೆ ನಿರ್ಧಾರ.. - ಬಿ.ಸಿ.ಪಾಟೀಲ್

ಬಿ ಸಿ ಪಾಟೀಲ್ ಕಾಂಗ್ರೆಸ್ ತೊರೆದ ಹಿನ್ನೆಲೆಯಲ್ಲಿ ಹಿರೇಕೆರೂರು ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್‌ ಮುಂದಾಗಿದೆ. ಪಕ್ಷ ಸಂಘಟನೆಯ ಜತೆಗೆ ಬಿ ಸಿ ಪಾಟೀಲರಿಗೆ ಬಿಸಿ ಮುಟ್ಟಿಸೋದಕ್ಕೆ ಕಾಂಗ್ರೆಸ್‌ ನಿರ್ಧರಿಸಿದೆ. ಪಕ್ಷ ಸಂಘಟಿಸಲು ಕಾರ್ಯಕರ್ತರನ್ನ ಹುರುದುಂಬಿಸಲಾಗುತ್ತಿದೆ.

congress meeting,ಕಾಂಗ್ರೆಸ್​ ಸಭೆ

By

Published : Aug 3, 2019, 8:07 PM IST

ಹಾವೇರಿ:ಹಿರೇಕೆರೂರು ಶಾಸಕ ಬಿ ಸಿ ಪಾಟೀಲ್ ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಬಿ ಸಿ ಪಾಟೀಲ್ ಕಾಂಗ್ರೆಸ್ ತೊರೆದ ಹಿನ್ನೆಲೆಯಲ್ಲಿ ಹಿರೇಕೆರೂರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಕಾಂಗ್ರೆಸ್ ಪಕ್ಷ ಮುಂದಾಗಿದೆ.

ಹಿರೇಕೆರೂರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮುಂದಾದ ಕಾಂಗ್ರೆಸ್ ..

ಹಿರೇಕೆರೂರು ಕ್ಷೇತ್ರದ ಉಸ್ತುವಾರಿಯನ್ನು ಜಿಲ್ಲೆಯ ಮುಖಂಡರಾದ ಮಾಜಿ ಸಚಿವ ರುದ್ರಪ್ಪ ಲಮಾಣಿ, ಮನೋಹರ್ ತಹಶೀಲ್ದಾರ್, ಕೆ ಬಿ ಕೋಳಿವಾಡ್ ಹಾಗೂ ಶ್ರೀನಿವಾಸ್​ಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಖಂಡರು ಹಿರೇಕೆರೂರಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಪ್ರಬಲ ಅಭ್ಯರ್ಥಿ ಆಯ್ಕೆ ಮಾಡಲು ಕಾಂಗ್ರೆಸ್ ಚಿಂತನೆ ನಡೆಸಿದ್ದು, ಹೈ ಕಮಾಂಡ್​ ಯಾವುದೇ ಅಭ್ಯರ್ಥಿ ಹಾಕಿದರೂ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸುವುದಾಗಿ ಕಾರ್ಯಕರ್ತರು ತಿಳಿಸಿದ್ದಾರೆ.

ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್ ಕೆ ಕರಿಯಣ್ಣನವರ್ ಈಟಿವಿ ಭಾರತ್​ನೊಂದಿಗೆ ಮಾತನಾಡಿ, ಬಿ ಸಿ ಪಾಟೀಲ್ ಅವರು ಕಾಂಗ್ರೆಸ್​ನ ತೊರೆದು ಈ ಕ್ಷೇತ್ರದ ಜನತೆಗೆ ಮೋಸ ಮಾಡಿದ್ದಾರೆ. ಅವರು ತಾಳ್ಮೆಯಿಂದ ಇದ್ದಿದ್ದರೆ ಪಕ್ಷದಲ್ಲಿ ಅವಕಾಶಗಳಿದ್ದವು. ಇದನ್ನು ಅವರು ಕಳೆದುಕೊಂಡಿದ್ದಾರೆ. ನಮ್ಮ ಎಲ್ಲಾ ಶಾಸಕರು ಚುನಾವಣೆಯನ್ನು ಎದುರಿಸಿಲು ಸನ್ನದ್ಧರಾಗಿದ್ದಾರೆ. ಬಿ ಸಿ ಪಾಟೀಲ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ ಎಂ ಹಿರೇಮಠ, ಕಾಂಗ್ರೆಸ್ ಸ್ಥಳೀಯ ನಾಯಕರಾದ ಬಿ ಹೆಚ್ ಬನ್ನಿಕೋಡ, ಜಿಲ್ಲಾಪಂಚಾಯತ್ ಅಧ್ಯಕ್ಷ ಎಸ್ ಕೆ ಕರಿಯಣ್ಣನವರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ABOUT THE AUTHOR

...view details