ಕರ್ನಾಟಕ

karnataka

ETV Bharat / state

ಅನರ್ಹ...ಅನರ್ಹ... ಅನರ್ಹ ಎಂದು ಆರ್.ಶಂಕರ್​ಗೆ ಕಿಚಾಯಿಸಿದ ಕೈ ಕಾರ್ಯಕರ್ತರು - ರಾಣೀಬೆನ್ನೂರು ಉಪಚುನಾವಣೆ

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರದ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಈಗ ಕಾಂಗ್ರೆಸ್​ ಮತ್ತು ಮತ್ತು ಬಿಜೆಪಿ ನಡುವೆ ಜಟಾಪಟಿ ಜೋರಾಗಿದೆ.

wdswd
ಅನರ್ಹ ಶಾಸಕ ಆರ್.ಶಂಕರ್​,ಬಿಜೆಪಿ ಅಭ್ಯರ್ಥಿ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ!

By

Published : Dec 1, 2019, 1:02 PM IST

ರಾಣೇಬೆನ್ನೂರು: ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ತಾಲೂಕಿನ ಕರೂರು ಗ್ರಾಮದಲ್ಲಿ ನಡೆದಿದೆ.

ಶನಿವಾರ ರಾತ್ರಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ್​ ಪೂಜಾರ​ ಪರ ಆರ್.ಶಂಕರ್ ಮತಯಾಚನೆಗೆ ತೆರಳಿದಾಗ ಈ ಪ್ರಸಂಗ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಅನರ್ಹ, ಅನರ್ಹ ಎಂದು ಘೋಷಣೆ ಕೂಗಿ ನಂತರ ಕಾರ್ಯಕರ್ತರು ಪ್ರಚಾರ ವಾಹನದಿಂದ ಕೆಳಗಿಳಿಯುವಂತೆ ಆಗ್ರಹಿಸಿದ್ದಾರೆ. ಇದರಿಂದ ಮುಜಗರಕ್ಕೆ ಒಳಗಾದ ಆರ್.ಶಂಕರ್​ ಅರ್ಧಕ್ಕೆ ಭಾಷಣ ಮುಗಿಸಿದ್ದಾರೆ.

ಅನರ್ಹ ಶಾಸಕ ಆರ್.ಶಂಕರ್​, ಬಿಜೆಪಿ ಅಭ್ಯರ್ಥಿ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ!

ನಂತರ ಬಿಜೆಪಿ ಅಭ್ಯರ್ಥಿ ಅರುಣಕುಮಾರ್​ ಭಾಷಣ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವೋಟ್ ಫಾರ್ ಕಾಂಗ್ರೆಸ್, ವೋಟ್ ಫಾರ್ ಕಾಂಗ್ರೆಸ್ ಅಂತ ಜೋರಾಗಿ ಕೂಗಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿ ಭಾಷಣ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

ABOUT THE AUTHOR

...view details