ಹಾವೇರಿ :ಜಿಲ್ಲೆಯ ಕೊರೊನಾ ಪ್ರಕರಣಗಳ ಕುರಿತು ರಾಜ್ಯ ಮತ್ತು ಜಿಲ್ಲೆಯ ಹೆಲ್ತ್ ಬುಲೆಟಿನ್‌ಗಳಲ್ಲಿ ಶುಕ್ರವಾರ ಗೊಂದಲ ಸೃಷ್ಟಿಯಾಗಿದೆ.
ಹಾವೇರಿ: ಕೊರೊನಾ ಪ್ರಕರಣಗಳ ಕುರಿತು ಹೆಲ್ತ್ ಬುಲೆಟಿನ್‌ನಲ್ಲಿ ಗೊಂದಲ - corona cases
ಜಿಲ್ಲೆಯಲ್ಲಿ ವ್ಯಕ್ತಿ ಇಲ್ಲವಾದ್ದರಿಂದ ಜಿಲ್ಲಾಡಳಿತ 18 ಪ್ರಕರಣ ಮಾತ್ರ ದೃಢಪಡಿಸಿದೆ. ಆದರೆ, ವ್ಯಕ್ತಿ ಹಾವೇರಿಗೆ ಸೇರಿದವರು ಎಂದು ರಾಜ್ಯ ಬುಲೆಟಿನ್‌ನಲ್ಲಿ 19 ಪ್ರಕರಣ ದೃಢಪಟ್ಟಿವೆ.
ಕೋವಿಡ್-19 ಆಸ್ಪತ್ರೆ
ರಾಜ್ಯ ಬುಲೆಟಿನ್‌ನಲ್ಲಿ ಹಾವೇರಿಯಲ್ಲಿ 19 ಪ್ರಕರಣ ದೃಢಪಟ್ಟಿವೆ ಎಂದು ತಿಳಿಸಲಾಗಿದೆ. ಆದರೆ, ಜಿಲ್ಲಾ ಬುಲೆಟಿನ್ 18 ಪ್ರಕರಣ ಎಂದು ಖಚಿತಪಡಿಸಿದೆ. ಬೆಂಗಳೂರಿನಲ್ಲಿ ದಾಖಲಾದ ಹಾವೇರಿ ಮೂಲದ ಸೋಂಕಿತ ವ್ಯಕ್ತಿ ಈ ಗೊಂದಲಕ್ಕೆ ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ ವ್ಯಕ್ತಿ ಇಲ್ಲವಾದ್ದರಿಂದ ಜಿಲ್ಲಾಡಳಿತ 18 ಪ್ರಕರಣ ಮಾತ್ರ ದೃಢಪಡಿಸಿದೆ. ಆದರೆ, ವ್ಯಕ್ತಿ ಹಾವೇರಿಗೆ ಸೇರಿದವರು ಎಂದು ರಾಜ್ಯ ಬುಲೆಟಿನ್‌ನಲ್ಲಿ 19 ಪ್ರಕರಣ ದೃಢಪಟ್ಟಿವೆ. ಜಿಲ್ಲೆಯಲ್ಲಿ ಈವರೆಗೂ 6 ಮಂದಿ ಗುಣಮುಖರಾಗಿದ್ದು, 13 ಸಕ್ರಿಯ ಪ್ರಕರಣಗಳಿವೆ (ರಾಜ್ಯ ಬುಲೆಟಿನ್ ಮಾಹಿತಿ ಪ್ರಕಾರ).