ಶಿವಮೊಗ್ಗ:ಪಾಸ್ ಇಲ್ಲದೆ ಮಹಾರಾಷ್ಟ್ರದಿಂದ ಅನಧಿಕೃತವಾಗಿ ಜಿಲ್ಲೆಗೆ ಬಂದಿದ್ದ ಐವರ ವಿರುದ್ಧ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.
ಪರವಾನಿಗೆ ಇಲ್ಲದೆ ಜಿಲ್ಲೆ ಪ್ರವೇಶ: ಶಿವಮೊಗ್ಗದಲ್ಲಿ ಐವರ ವಿರುದ್ಧ ಪ್ರಕರಣ - ಪರವಾನಿಗೆ ಇಲ್ಲದೆ ಜಿಲ್ಲೆ ಪ್ರವೇಶ
ಪಾಸ್ ಇಲ್ಲದೆ ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಬಂದಿದ್ದ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರವಾನಿಗೆ ಇಲ್ಲದೆ ಜಿಲ್ಲೆ ಪ್ರವೇಶ: ಐವರ ವಿರುದ್ಧ ದೂರು ದಾಖಲು
ಮೇ 12 ರಂದು ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಳ್ಳಿಬೈಲು ಗ್ರಾಮಕ್ಕೆ ಮಹಾರಾಷ್ಟ್ರದಿಂದ ಯಾವುದೇ ಪಾಸ್ ಇಲ್ಲದೆ ಅನಧಿಕೃತವಾಗಿ ಬಂದಿದ್ದ ಓರ್ವನ ವಿರುದ್ಧ ಹಾಗೂ ತಮಿಳುನಾಡಿನಿಂದ ಶಿವಮೊಗ್ಗದ ತುಂಗಾನಗರಕ್ಕೆ ಬಂದಿದ್ದ ನಾಲ್ವರ ವಿರುದ್ಧ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕಲಂ 51 (b) ಎನ್ಡಿಎಮ್ಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಈಗಾಗಲೇ ಅನಧಿಕೃತವಾಗಿ ಬಂದವರಿಗೆ ಪಾಸಿಟಿವ್ ಕಂಡು ಬಂದಿದ್ದು, ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಕ್ವಾರಂಟೈನ್ ಮಾಡಲಾಗಿದೆ. ಇವರು ತಂಗಿದ್ದ ಭಾಗಗಳನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.