ಕರ್ನಾಟಕ

karnataka

ETV Bharat / state

ಇಂದು ಬಿ.ಸಿ.ಪಾಟೀಲ್ ಪರ  ಸಿಎಂ ಪ್ರಚಾರ... ಮತ್ತಷ್ಟು ರಂಗೇರಿದ ಹಿರೇಕೆರೂರು ಚುನಾವಣಾ ಅಖಾಡ - ಹಿರೇಕೆರೂರು ಉಪಚುನಾವಣೆ

ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದಲ್ಲಿ ಅನರ್ಹ ಶಾಸಕ ಬಿ.ಸಿ.ಪಾಟೀಲ್​ ಪರ ಸಿಎಂ ಯಡಿಯೂರಪ್ಪ ಇಂದು ಪ್ರಚಾರ ನಡೆಸಲಿದ್ದಾರೆ.

CM to campaign for BC Patil today
ಇಂದು ಬಿ.ಸಿ.ಪಾಟೀಲ್ ಪರ ಪ್ರಚಾರ ಕೈಗೊಳ್ಳಲಿರುವ ಸಿಎಂ

By

Published : Nov 28, 2019, 8:30 AM IST

ಹಾವೇರಿ:ಜಿಲ್ಲೆಯ ಹಿರೇಕೆರೂರು ಉಪಚುನಾವಣೆ ಕಣ ಇದೀಗ ಮತ್ತಷ್ಟು ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಬಿ.ಸಿ.ಪಾಟೀಲ್​ ಪರ ಸಿಎಂ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ.

ಜಿಲ್ಲೆ ಹಿರೇಕೆರೂರು ಕ್ಷೇತ್ರದ ರಟ್ಟಿಹಳ್ಳಿಗೆ ಇಂದು ಮಧ್ಯಾಹ್ನ ಒಂದು ಗಂಟೆ ಮೂವತ್ತು ನಿಮಿಷಕ್ಕೆ ಸಿಎಂ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿದ್ದು, ಮಾಸೂರು ಗ್ರಾಮದಲ್ಲಿ ಪಾಟೀಲ್​ ಪರ ಸಾರ್ವಜನಿಕ ಸಭೆ ನಡೆಸುತ್ತಾರೆ. ಸಭೆ ನಂತರ ಹಿರೇಕೆರೂರು ಪಟ್ಟಣದಲ್ಲಿ ರೋಡ್ ಶೋ ನಡೆಸಲಿದ್ದಾರೆ.

ರೋಡ್ ಶೋ ಬಳಿಕ ಸಂಜೆ ನಾಲ್ಕು ಗಂಟೆಗೆ ಹಂಸಭಾವಿ ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಸುವ ಸಿಎಂ ಯಡಿಯೂರಪ್ಪ ಬಿ.ಸಿ.ಪಾಟೀಲ್ ಪರ ಮತಯಾಚಿಸಲಿದ್ದಾರೆ. ಸಿಎಂಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಸಾಥ್​ ನೀಡಲಿದ್ದಾರೆ.

ABOUT THE AUTHOR

...view details