ಕರ್ನಾಟಕ

karnataka

ETV Bharat / state

ಗಡಿ ವಿಚಾರ: ಸಿಎಂ ಗಟ್ಟಿ ನಿರ್ಧಾರದ ಮೂಲಕ ಉತ್ತರಿಸಬೇಕು- ಸಲೀಂ ಅಹ್ಮದ್ - haveri news

ಹಾವೇರಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಬೆಳಗಾವಿ ಗಡಿವಿವಾದ ಮಹಾರಾಷ್ಟ್ರದ ಎರಡು ಸಚಿವರು ಸಿಎಂ ಬಸವರಾಜ್ ಬೊಮ್ಮಾಯಿಗೆ ಚಾಲೆಂಜ್ ಮಾಡಿರುವ ಕ್ರಮ ನೋಡಿದರೆ ಖಂಡಿಸುವದಾಗಿ ಹೇಳಿದರು.

KPCC Working President Salim Ahmed
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

By

Published : Dec 5, 2022, 8:33 PM IST

ಹಾವೇರಿ:ಬೆಳಗಾವಿ ಗಡಿವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಇಬ್ಬರು ಸಚಿವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿರುವುದನ್ನು ಖಂಡಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು. ಹಾವೇರಿಯಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಮಹಾರಾಷ್ಟ್ರದಲ್ಲೂ ಅವರದ್ದೇ ಸರ್ಕಾರವಿದೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇದ್ದರೂ ಸಹ ರಾಜಕೀಯಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

ಈ ಕುರಿತಂತೆ ಸಿಎಂ ಬೊಮ್ಮಾಯಿ ಯಾವುದೇ ಹೇಳಿಕೆಗಳಿಗೆ ಬಗ್ಗಬಾರದು. ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಉತ್ತರಿಸಬೇಕು. ಅವರ ಜೊತೆ ನಾವಿದ್ದೇವೆ ಎಂದು ಹೇಳಿದರು.

ರಾಜ್ಯ ಸರ್ಕಾರ ಕೇಸರಿ ಶಾಲೆ ತೆರೆಯಲು ಹೊರಟಿರುವ ಕುರಿತಂತೆ ಮಾತನಾಡಿದ ಸಲೀಂ ಅಹ್ಮದ್, ಸರ್ಕಾರ ಮೊದಲು ನಲವತ್ತು ಪರ್ಸೆಂಟೇಜ್ ಕಮಿಷನ್ ತಡೆಯಲಿ ಎಂದು ಟೀಕಿಸಿದರು. ಆಮೇಲೆ ಕೇಸರಿ ಶಾಲೆ ಮದರಸಾ ನಿಷೇಧ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ:ರಾಹುಲ್ ಗಾಂಧಿಗೆ ಆರ್​ಎಸ್​ಎಸ್ ಕುರಿತು ಸಂಪೂರ್ಣ ಮಾಹಿತಿ ಇಲ್ಲ: ಸಿಎಂ ಬೊಮ್ಮಾಯಿ

ABOUT THE AUTHOR

...view details