ಹಾವೇರಿ:ರಾಜ್ಯದಲ್ಲಿರುವ ನೆರೆಹಾವಳಿ ನಿಭಾಯಿಸುವಲ್ಲಿ ಸಿ.ಎಂ.ಯಡಿಯೂರಪ್ಪ ಸಮರ್ಥವಾಗಿದ್ದಾರೆ. ಯಡಿಯೂರಪ್ಪನವರೇ ಸ್ವತಃ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ನೆರೆಹಾವಳಿ ನಿಭಾಯಿಸುವಲ್ಲಿ ಸಿಎಂ ಸಮರ್ಥರಾಗಿದ್ದಾರೆ: ಬೊಮ್ಮಾಯಿ ಸಮರ್ಥನೆ - ನೆರೆಹಾವಳಿಯನ್ನ ನಿಭಾಯಿಸುವಲ್ಲಿ ಸಿಎಂ ಸಮರ್ಥವಾಗಿದ್ದಾರೆ
ಭಾರಿ ಮಳೆಯಿಂದ ಹಾವೇರಿ ಸುತ್ತಮುತ್ತಲಿನ ಗ್ರಾಮಗಳು ಜಲಾವೃತಗೊಂಡಿದ್ದು, ನೆರೆಹಾವಳಿಗೆ ತುತ್ತಾದ ಗ್ರಾಮಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿರುವುದಾಗಿ ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
![ನೆರೆಹಾವಳಿ ನಿಭಾಯಿಸುವಲ್ಲಿ ಸಿಎಂ ಸಮರ್ಥರಾಗಿದ್ದಾರೆ: ಬೊಮ್ಮಾಯಿ ಸಮರ್ಥನೆ](https://etvbharatimages.akamaized.net/etvbharat/prod-images/768-512-4080057-thumbnail-3x2-hvr.jpg)
ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ ಮಾತನಾಡಿದ ಅವರು, ತಮ್ಮ ಕ್ಷೇತ್ರದಲ್ಲಿ 25 ಕ್ಕೂ ಅಧಿಕ ಗ್ರಾಮಗಳು ನೆರೆಹಾವಳಿಗೆ ತುತ್ತಾಗಿವೆ. ಈ ಹಿನ್ನೆಲೆಯಲ್ಲಿ ನೆರೆಹಾವಳಿಗೆ ತುತ್ತಾದ ಗ್ರಾಮಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿರುವುದಾಗಿ ತಿಳಿಸಿದರು. ಅಲ್ಲದೇ ಮನೆಗಳು ಹಾನಿಗೊಳಗಾದ ಸಂತ್ರಸ್ತರಿಗೆ ಹಾನಿಯನ್ನ ಗಮನಿಸಿ ಪರಿಹಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಅವಶ್ಯಕತೆ ಬಿದ್ದರೆ ಕೇಂದ್ರದಿಂದ ಇನ್ನು ರಕ್ಷಣೆ ಪಡೆಯುತ್ತಿದ್ದೇವೆ. ಕೇಂದ್ರ ಸರ್ಕಾರ 10 ಮಿಲಿಟರಿ ಬೋಟ್ ನೀಡಿದೆ. ಪರಿಸ್ಥಿತಿ ತಿಳಿದುಕೊಂಡು ಕೇಂದ್ರದ ನೆರವು ಕೋರುವುದಾಗಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.