ಕರ್ನಾಟಕ

karnataka

ETV Bharat / state

ಯಡಿಯೂರಪ್ಪನವರೇ ನೀವು ವೀರಶೈವರು ವೀರತ್ವ ತೋರಿಸಿ: ಸಿ‌.ಎಂ. ಇಬ್ರಾಹಿಂ - CM Ibrahim talking about Amit shah

ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜೋಡಿ ದೇಶದ ಸ್ಥಿತಿಯನ್ನ ಅದೋಗತಿಗೆ ತಂದಿದ್ದಾರೆ. ನಿರುದ್ಯೋಗ ಕಾಡುತ್ತಿದೆ. ದೇಶದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗಲಿಲ್ಲ. ಪಾರ್ಲಿಮೆಂಟ್​ನಲ್ಲಿ ಇದರ ಬಗ್ಗೆ ಚರ್ಚೆ ಆಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಸಿ‌.ಎಂ. ಇಬ್ರಾಹಿಂ ಹರಿಹಾಯ್ದಿದ್ದಾರೆ. ಇದೇ ವೇಳೆ ವೀರಶೈವರಾದ ಸಿಎಂ ಯಡಿಯೂರಪ್ಪ ಸಂಕಷ್ದಲ್ಲಿದ್ದು, ವೀರತ್ವ ತೋರಿಸಿ ಎಂದು ಕಾಲೆಳೆದಿದ್ದಾರೆ.

ಸಿ‌.ಎಂ.ಇಬ್ರಾಹಿಂ,  CM Ibrahim
ಸಿ‌.ಎಂ.ಇಬ್ರಾಹಿಂ

By

Published : Jan 5, 2020, 5:08 PM IST

Updated : Jan 5, 2020, 5:20 PM IST

ಹಾವೇರಿ: ಪ್ರಧಾನಿ ಮೋದಿ ಮತ್ತು ಗೃಹ ಸಚುವ ಅಮಿತ್ ಶಾ ಜೋಡಿ ದೇಶದ ಸ್ಥಿತಿಯನ್ನ ಅದೋಗತಿಗೆ ತಂದಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಸಿಎಂ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಪಾರ್ಲಿಮೆಂಟ್​ನಲ್ಲಿ ಇದರ ಬಗ್ಗೆ ಚರ್ಚೆ ಆಗುತ್ತಿಲ್ಲ. ಆರು ವರ್ಷಗಳಿಂದ ಮೂರು ತಲಾಕ್, 371, ಸಿಎಎ, ಎನ್ಆರ್ ಸಿ ಇಂಥಹದ್ದನ್ನೇ ಮಾಡಿಕೊಂಡು ಬರಲಾಗಿದೆ ಎಂದು ಕಿಡಿಕಾರಿದರು..

1947 ರಿಂದಲೂ ನಾಗರಿಕತ್ವ ಕೊಡುತ್ತಲೇ ಬಂದಿದ್ದೇವೆ. ಸಂವಿಧಾನ ತಿದ್ದುಪಡಿ ಮಾಡೋದರ ಅಗತ್ಯವಿತ್ತೆ.? ಟೂರಿಸಂ, ವಿದ್ಯುತ್ ಶಕ್ತಿ ಉತ್ಪಾದನೆ ಎಲ್ಲವೂ ಹಾಳಾಗಿದೆ. ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಅಡ್ವಾಣಿಯವರು ಮೌನ ಮುರಿಬೇಕಿದೆ. ಅಡ್ವಾಣಿಯವರೇ ನೀವು ಬಿಜೆಪಿ ಕಟ್ಟಿದ್ದೀರಿ. ನೀವು ಮೋದಿ, ಶಾಗೆ ಬುದ್ಧಿ ಹೇಳಿ ಎಂದು ಮನವಿ ಮಾಡಿದರು.

ಸಿ‌.ಎಂ.ಇಬ್ರಾಹಿಂ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದಂತೆ ಎಲ್ಲರೂ ಈ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ನೋಟ್​ ಬಂದ್​ ಮಾಡಿದಾಗ ಜನರು ಬ್ಯಾಂಕ್ ಮುಂದೆ ನಿಂತಂತೆ ತಲಾಟಿ ಆಫೀಸ್​ ಮುಂದೆ ನಿಲ್ಲೋ ಪರಿಸ್ಥಿತಿ ಬರುತ್ತೆ. ಬಿಜೆಪಿ ರಾಜ್ಯಗಳಿದ್ದಲ್ಲಿ ಗಲಾಟೆಗಳು ಆಗ್ತಿವೆ. ರಾಜ್ಯದ ಜನರು ಶಾಂತಿ ಪ್ರಿಯರು. ಇದು ಬಸವಣ್ಣನ ನಾಡು. ಆದ್ರೂ ಮಂಗಳೂರಲ್ಲಿ ಗಲಾಟೆ ಆಯ್ತು. ಸಿಎಂ ಯಡಿಯೂರಪ್ಪ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಯಡಿಯೂರಪ್ಪನವರೇ ನೀವು ವೀರಶೈವರು, ವೀರತ್ವ ತೋರಿಸಿ ಎಂದು ಕಾಲೆಳೆದ ಇಬ್ರಾಹಿಂ ಅವರು ಸಿಎಂ ಬಿಎಸ್​ವೈ ಡ್ರೈವಿಂಗ್ ಸೀಟ್​ಲ್ಲಿ ಕುಳಿತಿದ್ದಾರೆ. ಸ್ಟೇರಿಂಗ್, ಗೇರ್ ಬಾಕ್ಸ್ ಬಿ ಎಲ್​ ಸಂತೋಷ್​ ಕೈಯಲ್ಲಿ ಇವೆ ಎಂದು ವ್ಯಂಗ್ಯವಾಡಿದರು.

Last Updated : Jan 5, 2020, 5:20 PM IST

ABOUT THE AUTHOR

...view details