ಕರ್ನಾಟಕ

karnataka

ETV Bharat / state

ಬಸ್ಟ್ಯಾಂಡ್​ ಬಸವಿಯರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ: ಬಿಜೆಪಿ ನಾಯಕರನ್ನ ಲೇವಡಿ ಮಾಡಿದ ಇಬ್ರಾಹಿಂ - ಬಿಜೆಪಿ ನಾಯಕರ ಬಗ್ಗೆ ಸಿ.ಎಂ.ಇಬ್ರಾಹಿಂ ಹೇಳಿಕೆ

ಪಿಎಫ್ಐಗೆ ಪಾಕ್‌ನಿಂದ ಹಣ ಬರುತ್ತೆ ಎಂದಿರುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

cm ibrahim Teasing bjp leaders,ಬಿಜೆಪಿ ನಾಯಕರನ್ನ ಲೇವಡಿ ಮಾಡಿದ ಇಬ್ರಾಹಿಂ
ಸಿ.ಎಂ.ಇಬ್ರಾಹಿಂ

By

Published : Jan 28, 2020, 4:52 AM IST

ಹಾವೇರಿ:ಬಿಜೆಪಿ ಮುಖಂಡರಾದ ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ, ಸೋಮಶೇಖರ ರೆಡ್ಡಿ ಇವರೆಲ್ಲಾ ಬಸ್ಟ್ಯಾಂಡ್ ಬಸವಿಯರು. ಇವರ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

ಸಿ.ಎಂ.ಇಬ್ರಾಹಿಂ,ಕಾಂಗ್ರೆಸ್ ನಾಯಕ

ಹಾವೇರಿಯಲ್ಲಿ ಮಾತನಾಡಿದ ಅವರು ಪಿಎಫ್ಐಗೆ ಪಾಕ್‌ನಿಂದ ಹಣ ಬರುತ್ತೆ ಎಂದು ಇವರು ಆರೋಪ ಮಾಡಿದರೆ ನಾನು ಉತ್ತರಿಸುವುದಿಲ್ಲ. ಈ ಕುರಿತಂತೆ ಕೇಂದ್ರ ಗೃಹ ಸಚಿವ ಅಮೀತ್ ಶಾ, ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಲಿ ಅವರ ಆರೋಪಕ್ಕೆ ನಾನು ಉತ್ತರಿಸುತ್ತೇನೆ ಎಂದು ತಿಳಿಸಿದರು.

ಸಿಎಎ ವಿರುದ್ಧ ಹೋರಾಟದ ಕುರಿತಂತೆ ಮಾತನಾಡಿದ ಅವರು, ದೇಶ ಉಳಿಸಬೇಕು ಎನ್ನುವುದು ಅಮೀತ್ ಶಾ ಅಥವಾ ಮೋದಿ ಕೈಯಲ್ಲಿ ಇಲ್ಲ, ಅದು ಇರುವುದು ಜನರ ಕೈಯಲ್ಲಿ. ಎನ್ಆರ್‌ಸಿ ಕಾಯ್ದೆ ಕುರಿತಂತೆ ಗೃಹ ಸಚಿವ ಅಮೀತ್ ಶಾ ಒಂದು ರೀತಿ ಹೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಒಂದು ರೀತಿ ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಈ ಕುರಿತಂತೆ ರಾಜಕೀಯ ಪಕ್ಷಗಳು ಬೇಡ, ಸಂಘಟನೆಗಳ ಸಭೆ ಕರೆಯುವಂತೆ ಇಬ್ರಾಹಿಂ ಆಗ್ರಹಿಸಿದರು.

ಸಿಎಂ ಯಡಿಯೂರಪ್ಪಗೆ ಸಚಿವ ಸಂಪುಟ ವಿಸ್ತರಣೆ ಎನ್ನುವುದು ಕತ್ತೆ ಬಾಲಕ್ಕೆ ಡಬ್ಬಿ ಕಟ್ಟಿದಂತಾಗಿದೆ. ವಲಸೆ ಬಂದ ಶಾಸಕರು ಇದೀಗ ದೇವದಾಸಿಯರಂತಾಗಿದ್ದಾರೆ. ಬಿಜೆಪಿಯ ಕುಟುಂಬ ಕಾಪಾಡಿಕೊಂಡು ಬಂದ ಪಟ್ಟದ ರಾಣಿಯರಿಗೆ ಸಚಿವ ಸ್ಥಾನ ಕೊಡದೆ, ಕುಣಿಯುವ ರಾಣೆಯರಿಗೆ ಸಚಿವ ಸ್ಥಾನ ಕೊಟ್ಟರೆ ಪಟ್ಟದ ರಾಣಿಯರು ಸುಮ್ಮನೀರಬೇಕಲ್ಲಾ ಎಂದು ಇಬ್ರಾಹಿಂ ಲೇವಡಿ ಮಾಡಿದ್ದಾರೆ.

ABOUT THE AUTHOR

...view details