ಕರ್ನಾಟಕ

karnataka

ETV Bharat / state

ಸಿಎಂ ಯಡಿಯೂರಪ್ಪ ಕಾಮಧೇನು ಇದ್ದಂತೆ: ಬಿ.ಸಿ.ಪಾಟೀಲ್​​ - ಸಿಎಂ ಯಡಿಯೂರಪ್ಪ ಕಾಮಧೇನು ಎಂದ ಬಿ ಸಿ ಪಾಟೀಲ್

ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಮ್ಮದು ನಂ.1 ಆಗಬೇಕು. ಹೆಚ್ಚಿನ ಮತಗಳ ಅಂತರದಿಂದ ನಮ್ಮನ್ನು ಗೆಲ್ಲಿಸಬೇಕು. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಅಸಮಾಧಾನ ಇದೆ. ಆದ್ರೆ, ನಮ್ಮಲ್ಲಿ ಹಾಗಿಲ್ಲ. ಯು.ಬಿ.ಬಣಕಾರ ಮತ್ತು ನಾನು ಜೋಡೆತ್ತಿನ ರೀತಿ ಇದ್ದೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.

ಸಿ.ಎಂ.ಯಡಿಯೂರಪ್ಪ ಕಾಮಧೇನು ಇದ್ದಂತೆ: ಬಿ.ಸಿ.ಪಾಟೀಲ್

By

Published : Nov 20, 2019, 2:04 PM IST

ಹಿರೇಕೆರೂರು(ಹಾವೇರಿ): ಸಿಎಂ ಯಡಿಯೂರಪ್ಪ ಕಾಮಧೇನು ಇದ್ದಂತೆ. ಅವರು ಒಳ್ಳೆಯ ಹಾಲು ಕೊಡುವ ಆಕಳು. ಅವರಿಂದ‌ ಸಾಕಷ್ಟು ಹಾಲು ಕರೆದುಕೊಳ್ಳಬಹುದು ಎಂದು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಹೇಳಿದರು.

ಸಿಎಂ ಯಡಿಯೂರಪ್ಪ ಕಾಮಧೇನು ಇದ್ದಂತೆ: ಬಿ.ಸಿ.ಪಾಟೀಲ್

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಯಮ್ಮಿಗನೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ದೇವೇಗೌಡರ ಮಾತು ಕೇಳಿ ಸ್ಪೀಕರ್ ನನ್ನನ್ನ ಅನರ್ಹ ಮಾಡಿದ್ರು. ಹೆಂಡತಿಗೆ ಗಂಡ ಡೈವೋರ್ಸ್ ಕೊಟ್ಟ ಮೇಲೆ ಮುಗೀತು. ಗಂಡನದ್ದು ಮತ್ತೇನು? ಯಡಿಯೂರಪ್ಪ ನನ್ನ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಯಡಿಯೂರಪ್ಪ ಹಿಂದೆಯೇ ನಮ್ಮನ್ನ ಪಕ್ಷಕ್ಕೆ ಕರೆದಿದ್ದರು. ಆಗ ನಾವು ಕಾಂಗ್ರೆಸ್​​ನಿಂದ ಗೆದ್ದಿದ್ದೆವು. ಹಾಗಾಗಿ ಕಾಂಗ್ರೆಸ್​ ನಮ್ಮ ಕೈ ಹಿಡಿಯತ್ತೆ ಅಂತಾ ನಂಬಿದ್ದೆವು. ಆದರೆ ಅವರು ಕೈ ಹಿಡಿಲಿಲ್ಲ. ಅದಕ್ಕೆ ನಾವೇ ಅವರಿಗೆ ಕೈ ಕೊಟ್ಟೆವು ಎಂದು ವ್ಯಂಗ್ಯವಾಡಿದರು.


ABOUT THE AUTHOR

...view details