ಕರ್ನಾಟಕ

karnataka

ETV Bharat / state

ನನ್ನ ಮರಣದ ನಂತರ ಹೆಣವನ್ನ ಇದೇ ಕ್ಷೇತ್ರದಲ್ಲಿ ಹೂಳಬೇಕು : ಸಿಎಂ ಭಾವನಾತ್ಮಕ ಮಾತು..! - Etv Bharat Kannada

ನಾನು ಸತ್ತ ನಂತರ ನನ್ನ ಹೆಣವನ್ನ ಶಿಗ್ಗಾಂವಿ ಕ್ಷೇತ್ರದಲ್ಲೇ ಹೂಳಬೇಕು ಎಂದು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಸಿಎಂ ಬೊಮ್ಮಾಯಿ ಹೇಳಿದರು.

bommai emotional speech in haveri
ಸಿಎಂ ಭಾವನಾತ್ಮಕ ಮಾತು

By

Published : Dec 17, 2022, 8:03 PM IST

Updated : Dec 17, 2022, 10:14 PM IST

ಸಿಎಂ ಭಾವನಾತ್ಮಕ ಮಾತು

ಹಾವೇರಿ: ನಾನು ಸತ್ತ ಮೇಲೆ ನನ್ನ ಹೆಣವನ್ನ ಶಿಗ್ಗಾಂವಿ ಕ್ಷೇತ್ರದಲ್ಲಿ ಹೂಳಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭಾವನಾತ್ಮಕವಾಗಿ ಮಾತನಾಡಿ ಕಣ್ಣೀರು ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರ​ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎಂ ಮಾತನಾಡಿದರು. ಶಿಗ್ಗಾಂವಿ ಕ್ಷೇತ್ರದ ಜನರು ನನಗೆ ಮಾಡಿದ ಆಶೀರ್ವಾದದಿಂದ ನಾನು ಈ ಹುದ್ದೆಗೆ ಬಂದಿದ್ದೇನೆ. ಶಿಗ್ಗಾಂವಿ ಕ್ಷೇತ್ರದ ಜನ ನನ್ನನ್ನು ಮನೆಯ ಸದಸ್ಯನಂತೆ ನೋಡಿಕೊಂಡಿದ್ದಾರೆ.

ಬೇರೆ ಕ್ಷೇತ್ರದ ಜನರಲ್ಲಿ ಸಹ ನನ್ನ ಕ್ಷೇತ್ರದ ಜನರನ್ನ ಕಾಣುತ್ತೇನೆ. ಅಲ್ಲದೇ ಇಲ್ಲಿಯ ಜನ ನೀಡಿದ ರೊಟ್ಟಿ ಬುತ್ತಿಯನ್ನು ಎಂದು ಮರೆಯುವುದಿಲ್ಲ. ನಾನು ಸತ್ತ ನಂತರವೂ ನನ್ನ ಹೆಣವನ್ನ ಸಿಗ್ಗಾಂವಿ ಕ್ಷೇತ್ರದಲ್ಲೇ ಹೂಳಬೇಕು ಎಂದು ಹೇಳಿ ಭಾವುಕರಾದರು.

ಇದನ್ನೂ ಓದಿ:ಶ್ರೀನಿವಾಸ್ ಪ್ರಸಾದ್​ ಗಲ್ಲಿ ರೌಡಿಗಳ ರೀತಿ ಮಾತನಾಡಬೇಡಿ: ಎಂಎಲ್​ಸಿ ವಿಶ್ವನಾಥ್

ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್ ಅಶೋಕ ವಸತಿ ಶಾಲೆಯ ವಿದ್ಯಾರ್ಥಿನಿಗಳ ಜೊತೆ ಸಹ ಪಂಕ್ತಿ ಭೋಜನ ಮಾಡಿದರು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಜೊತೆ ಸಿಎಂ ಬೊಮ್ಮಾಯಿ ಭೋಜನ ಸವಿದರು. ಬಾಡದಲ್ಕಿ ಕಂದಾಯ ಸಚಿವ ಆರ್.ಅಶೋಕ ಗ್ರಾಮ ವಾಸ್ತವ್ಯ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಆರ್.ಅಶೋಕ ವಿದ್ಯಾರ್ಥಿಗಳ ಜೊತೆ ಭೋಜನ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಸಚಿವ ಅಶೋಕ್ ಜೊತೆ ಬೊಮ್ಮಾಯಿ ಸಹ ಭೋಜನ ಮಾಡಿದರು. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಮುಳುಗಾಯಿ ಎಣಗಾಯಿ, ಗೋಧಿ ಹುಗ್ಗಿಯನ್ನ ಬೊಮ್ಮಾಯಿ ಸವಿದರು. ಸಿಎಂ ಜೊತೆ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಸಹ ಭೋಜನ ಸವಿದರು

Last Updated : Dec 17, 2022, 10:14 PM IST

ABOUT THE AUTHOR

...view details