ಹಾವೇರಿ:''ನಿಮ್ಮ ಹುರುಪು ನೋಡಿದ್ರೆ ನಮ್ಮ ಅಭ್ಯರ್ಥಿ ಶಿವರಾಜ ಸಜ್ಜನರ 25 ಸಾವಿರ ಮತಗಳ ಅಂತರದಿಂದ ಗೆಲ್ತಾರೆ. ಹಾನಗಲ್ ತಾಲೂಕಿನಲ್ಲಿ ಬಿಜೆಪಿಯ ಸುನಾಮಿಯೆ ಎದ್ದಿದೆ'' ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು.
ಸಿಎಂ ಬೊಮ್ಮಾಯಿ ಚುನಾವಣಾ ಪ್ರಚಾರ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ನಡೆದ ಪ್ರಚಾರ ಸಭೆಯಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ರು. ಸಿದ್ದರಾಮಯ್ಯ ಇಲ್ಲಿ ಬಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸ್ತೀನಿ ಅಂತಾ ಕನಸು ಕಂಡಿದ್ದೀರಿ. ಅವರಿಗೆ ಗೊತ್ತಾಗಿದೆ, ನಮ್ಮ ಕನಸು ನನಸಾಗೋದಿಲ್ಲ ಅಂತಾ.. ಹಾಗಾಗಿ ಸಿದ್ದರಾಮಯ್ಯ ಸುಳ್ಳು ಹೇಳ್ತಿದ್ದಾರೆ. ಅವರ ಮಾತು ನಂಬಬೇಡಿ ಎಂದು ಸಿಎಂ ಜನರಲ್ಲಿ ಮನವಿ ಮಾಡಿದರು.
ಈ ಕ್ಷೇತ್ರದಲ್ಲಿ ನೀರಾವರಿ ಅಭಿವೃದ್ಧಿ ಮಾಡಿದವರು ದಿವಂಗತ ಉದಾಸಿ. ಸಿದ್ದರಾಮಯ್ಯ ಐದು ವರ್ಷ ಸಿಎಂ ಇದ್ದಾಗ ಹಾನಗಲ್ ತಾಲೂಕಿನ ನೆನಪಿತ್ತಾ.? ಹಾವೇರಿ ಜಿಲ್ಲೆಗೆ ಉದಾಸಿಯವರು ಮತ್ತು ನಾವು ಸೇರಿ ಮೆಡಿಕಲ್ ಕಾಲೇಜು ತಂದಿದ್ವಿ. ಅದನ್ನೂ ಗದಗಕ್ಕೆ ತೆಗೆದುಕೊಂಡು ಹೊಂಟಿದ್ರು. ಔದ್ಯೋಗಿಕ ಕ್ರಾಂತಿ ಆಗಬೇಕು, ಬರುವ ದಿನಗಳಲ್ಲಿ ನಿಮ್ಮ ಕೈಗೆ ಕೆಲಸ ಸಿಗೋ ಕೆಲಸವನ್ನ ನಮ್ಮ ಸರಕಾರ ಮಾಡುತ್ತದೆ.
ನಮ್ಮ ಅಭ್ಯರ್ಥಿ ಸಜ್ಜನರ ದಿವಂಗತ ಉದಾಸಿಯವರ ಜೊತೆ ಸೇರಿ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಓಡಾಡಿದ್ದಾರೆ. ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ ಶಿವರಾಜ ಸಜ್ಜನರ ಗೆಲುವು ಅಷ್ಟೆ ಸತ್ಯ. ಎಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಕಮಲದ ಗುರ್ತಿಗೆ ಮತ ನೀಡಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ:ಪ್ರತಿಪಕ್ಷದವರು ಎಷ್ಟೇ ಹಾರಾಡಿದರೂ ಉಪಚುನಾವಣೆಯಲ್ಲಿ ಬಿಜೆಪಿಗೇ ಜಯ: ವಿಜಯೇಂದ್ರ ಭವಿಷ್ಯ