ಹಾವೇರಿ :ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದಾರೆ. ಬಿಎಸ್ವೈ ಪ್ರಚಾರ ಕಾರ್ಯಕ್ಕೆ ಬಂದಿದ್ದು ಆನೆ ಬಲ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿರುವುದು.. ಹಾನಗಲ್ ಪಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಕಾಗದಲ್ಲಿ 15 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದರು. ಅದಕ್ಕೆ ದುಡ್ಡು ಇಡಬೇಕಲ್ಲ. ಕಾಗದದಲ್ಲಿ ಮಂಜೂರು ಮಾಡಿದರೆ ಬಡವರಿಗೆ ಸೂರು ಸಿಗುತ್ತಾ.? ಚುನಾವಣೆಗೆ ಮೂರು ತಿಂಗಳು ಇರುವಾಗ ಮಂಜೂರಾತಿ ಮಾಡಿದ್ದರು.
ಆಗ ಮನೆಯನ್ನು ಕಟ್ಟಲು ಆಗಲಿಲ್ಲ. ಇದೇನು ದೊಡ್ಡ ಸಾಧನೆ ಅಲ್ಲ. ಅವರ ಆಡಳಿತಾವಧಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದರೆ ಸಾಧನೆ ಎಂದು ಒಪ್ಪಿಕೊಳ್ಳಬಹುದಿತ್ತು ಎಂದರು. ನಾನು ಅಧಿಕಾರಕ್ಕೆ ಬಂದ ಮೇಲೆ ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಲಕ್ಷ ಹಾಗೂ ನಗರ ಪ್ರದೇಶಗಳಲ್ಲಿ 1 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದೇನೆ.
ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಹೀಗಾಗಿ, ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯನವರು ಹಿರಿಯ ನಾಯಕರಾಗಿ ಮಂಜೂರಾತಿ, ಹಣ ಬಿಡುಗಡೆ, ಮನೆ ನಿರ್ಮಾಣ ಮಾಡೋದು ಬೇರೆ ಎಂಬುದರ ಬಗೆಗೆ ವ್ಯತ್ಯಾಸ ಗೊತ್ತಿಲ್ವಾ?. ಕಾಗದಲ್ಲಿ ಮಂಜೂರಾದರೆ ಮನೆ ನಿರ್ಮಾಣ ಆಗುತ್ತಾ ಎಂದರು.