ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ದೇಶಿ ಕ್ರೀಡೆಗಳ ಕಲರವ.. ಮಕ್ಕಳ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಂಡ ಚಿಣ್ಣರು

ಮಕ್ಕಳಿಗೆ ದೇಶೀಯ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸಲು ಹಾವೇರಿಯ ಶಿಕ್ಷಕರ ಬಳಗದಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳ ಹಬ್ಬ ಆಯೋಜಿಸಿತ್ತು. ನೂರಾರು ಮಕ್ಕಳು ದೇಶಿ ಆಟದಲ್ಲಿ ಸಂಭ್ರಮದಿಂದ ಪಾಲ್ಗೊಂಡರು.

childrens-day-celebration-at-haveri
ಹಾವೇರಿಯಲ್ಲಿ ದೇಶಿ ಕ್ರೀಡೆಗಳೊಂದಿಗೆ ಮಕ್ಕಳ ಹಬ್ಬ ಆಚರಣೆ : ಸಂಭ್ರಮದಿಂದ ಪಾಲ್ಗೊಂಡ ಮಕ್ಕಳು

By

Published : Nov 13, 2022, 6:13 PM IST

ಹಾವೇರಿ : ಆಧುನಿಕತೆ, ಯಾಂತ್ರೀಕರಣ ಮತ್ತು ನಗರೀಕರಣಗಳಿಂದ ನಮ್ಮ ದೇಶಿಯ ಕ್ರೀಡೆಗಳು ಮರೆಯಾಗುತ್ತಿವೆ. ಕಂಪ್ಯೂಟರ್ ಮತ್ತು ಮೊಬೈಲ್​ ಗೇಮ್​ಗಳಲ್ಲಿ ಮಕ್ಕಳು ತೊಡಗಿದ್ದು, ನಮ್ಮ ದೇಶಿಯ ಕ್ರೀಡೆಗಳ ಬಗ್ಗೆ ಅರಿವೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮರಳಿ ಮಕ್ಕಳಿಗೆ ದೇಶಿಯ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸಲು ಹಾವೇರಿಯ ಶಿಕ್ಷಕರ ಬಳಗ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳ ಹಬ್ಬ ಆಯೋಜಿಸಿತ್ತು.

ಮಕ್ಕಳ ಹಬ್ಬದಲ್ಲಿ ನಗರದ ನೂರಾರು ಮಕ್ಕಳು ಪಾಲ್ಗೊಂಡಿದ್ದರು

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮಕ್ಕಳ ಹಬ್ಬದಲ್ಲಿ ನಗರದ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡ ಚಿಣ್ಣರಿಗೆ ಚಿನ್ನಿದಾಂಡು, ಸರಗೋಲು, ಬುಗುರಿ ಆಟ, ಮಂಗನ ಆಟ, ಕುಂಟಬಿಲ್ಲೆ, ಹಗ್ಗಜಗ್ಗಾಟ, ಗೋಲಿ ಹೀಗೆ ತರಹೇವಾರಿ ದೇಶಿಯ ಆಟಗಳನ್ನು ಆಡಿಸಲಾಯಿತು. ಚಿಣ್ಣರು ವಿವಿಧ ಆಟಗಳನ್ನು ಆಡಿ ಸಂಭ್ರಮಿಸಿದರು.

ಹಾವೇರಿಯಲ್ಲಿ ದೇಶಿ ಕ್ರೀಡೆಗಳೊಂದಿಗೆ ಮಕ್ಕಳ ಹಬ್ಬ ಆಚರಣೆ
ಹಾವೇರಿಯಲ್ಲಿ ದೇಶಿ ಕ್ರೀಡೆಗಳೊಂದಿಗೆ ಮಕ್ಕಳ ಹಬ್ಬ ಆಚರಣೆ

ಪ್ರತಿನಿತ್ಯ ಮೊಬೈಲ್, ಪುಸ್ತಕ, ಹೋಂ ವರ್ಕ್ ಎಂದು ಶಾಲಾ ತರಗತಿಯಲ್ಲಿ ಮಗ್ನರಾಗಿರುತ್ತಿದ್ದ ಮಕ್ಕಳು ಇವತ್ತು ದೇಶಿಯ ಆಟಗಳಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು. ಅಲ್ಲದೆ ಮಕ್ಕಳ ಜೊತೆ ಬಂದಿದ್ದ ಪೋಷಕರು ದೇಶಿ ಕ್ರೀಡೆಗಳನ್ನು ಆಟವಾಡುವ ಮೂಲಕ ತಮ್ಮ ಬಾಲ್ಯದ ದಿನಗಳಿಗೆ ಜಾರಿದರು. ಅಲ್ಲದೆ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಮಕ್ಕಳ ದಿನಾಚರಣೆಯನ್ನು ಶಿಕ್ಷಕರ ಬಳಗ ವಿಶಿಷ್ಟವಾಗಿ ಆಚರಿಸಿದ್ದಕ್ಕೆ ಸಂತಸಪಟ್ಟರು.

ಹಾವೇರಿಯಲ್ಲಿ ದೇಶಿ ಕ್ರೀಡೆಗಳೊಂದಿಗೆ ಮಕ್ಕಳ ಹಬ್ಬ ಆಚರಣೆ : ಸಂಭ್ರಮದಿಂದ ಪಾಲ್ಗೊಂಡ ಮಕ್ಕಳು

ಇದನ್ನೂ ಓದಿ :ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಪ್ರಮುಖ ಅತಿಥಿಯಾಗಿ ಕಿಟಲ್​​​​​ ಮರಿಮೊಮ್ಮಗಳು

ABOUT THE AUTHOR

...view details