ಬ್ಯಾಡಗಿ/ಹಾವೇರಿ:ಬೈಕ್ ಗೆ ಬೊಲೆರೋ ವಾಹನ ಡಿಕ್ಕಿಯಾಗಿ ಐದು ವರ್ಷದ ಬಾಲಕ ಸಾವಿಗೀಡಾದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಬಳಿ ನಡೆದಿದೆ.
ಬ್ಯಾಡಗಿ ಬಳಿ ಬೈಕ್ಗೆ ಬೊಲೆರೋ ಡಿಕ್ಕಿ..5 ವರ್ಷದ ಬಾಲಕ ಸಾವು - haveri latest accident news
ಬೈಕ್ ಗೆ ಬೊಲೆರೋ ವಾಹನ ಡಿಕ್ಕಿಯಾಗಿ ಐದು ವರ್ಷದ ಬಾಲಕ ಸಾವಿಗೀಡಾದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಬಳಿ ನಡೆದಿದೆ.

5 ವರ್ಷದ ಬಾಲಕ ಸಾವು
ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದ ದಿಲೀಪ್ ಬೀರಪ್ಪ ಪೂಜಾರ(5) ಮೃತ ಬಾಲಕ. ತಂದೆ ಬೀರಪ್ಪ ಪೂಜಾರ ತಮ್ಮ ಬೈಕ್ ನಲ್ಲಿ ಮಗನನ್ನು ಕರೆದುಕೊಂಡು ಹೊಲಕ್ಕೆ ತೆರಳುತ್ತಿದ್ದರು. ಈ ಸಮಯದಲ್ಲಿ ರಾಣೆಬೆನ್ನೂರು ಮಾರ್ಗವಾಗಿ ಬ್ಯಾಡಗಿಗೆ ತೆರಳುತ್ತಿದ್ದ ಬೋಲೆರೋ ವಾಹನ ಡಿಕ್ಕಿಯಾಗಿದೆ. ಇದರಿಂದ ಸ್ಥಳದಲ್ಲಿ ಮಗು ಸಾವನ್ನಪ್ಪಿದೆ, ತಂದೆ ಬೀರಪ್ಪ ಪೂಜಾರ ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.