ಹಾವೇರಿ:ತವರು ಕ್ಷೇತ್ರದ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಹಾಡಿ ಹೊಗಳಿದ್ದಾರೆ. ಶಿಗ್ಗಾಂವಿ-ಸವಣೂರು ಕ್ಷೇತ್ರದ ಜನರ ಮತಕ್ಕೆ ತ್ರಿಬಲ್ ಶಕ್ತಿ ಇದೆ. ಕಾರಣ ನೀವು ಅಮೂಲ್ಯ ಹಾಕಿದ ಮತಗಳಿಂದ ನಾನು ಶಾಸಕನಾದೆ, ಸಚಿವನಾದೆ, ಈಗ ಮುಖ್ಯಮಂತ್ರಿಯಾಗಿದ್ದೇನೆ. ಹೀಗಾಗಿ ನಿಮ್ಮ ಮತಕ್ಕೆ ತ್ರಿಬಲ್ ಪವರ್ ಇದೆ ಎಂದು ಸಿಎಂ ಹೇಳಿದ್ದಾರೆ.
ಶಿಗ್ಗಾಂವಿ ತಾಲೂಕಿನ ತಿಮ್ಮಾಪುರದಲ್ಲಿ ಕಂದಾಯ ಇಲಾಖೆಯಿಂದ ನಡೆಸಲಾದ ಮನೆ ಬಾಗಿಲಿಗೆ ದಾಖಲೆಗಳು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದ ಜನರು ನನಗೆ ಮತ ಹಾಕಿದ್ದರಿಂದಲೇ ನಾನು ಶಾಸಕ, ಸಚಿವ, ಮುಖ್ಯಮಂತ್ರಿ ಕೂಡ ಆಗಿದ್ದೇನೆ. ಇಲ್ಲಿಯ ಜನರ ಮತಕ್ಕೆ ಖಂಡಿತವಾಗಿಯೂ ತ್ರಿಬಲ್ ಶಕ್ತಿ ಇದೆ ಎಂದರು.