ಕರ್ನಾಟಕ

karnataka

ETV Bharat / state

ಶಾಸಕಾಂಗಕ್ಕಿಂತ ನ್ಯಾಯಾಂಗ ಶ್ರೇಷ್ಠ: ಮತ್ತೊಮ್ಮೆ ಸರಳತೆ ಮೆರೆದ ಸಿಎಂ ಬೊಮ್ಮಾಯಿ - ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲಾ ಪ್ರವಾಸ ಆರಂಭಗೊಂಡಿದೆ. ಇಂದು ಅವರು ಶಿಗ್ಗಾಂವಿಯಲ್ಲಿ ನಡೆದ ವಕೀಲ ಸಂಘ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು.

Chief minister basavaraj bommai Simplicity
ಶಿಗ್ಗಾಂವಿ ವಕೀಲ ಸಂಘ ಕಟ್ಟಡದ ಶಂಕುಸ್ಥಾಪನೆ

By

Published : Aug 21, 2022, 1:26 PM IST

Updated : Aug 21, 2022, 1:36 PM IST

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ನ್ಯಾಯಾಲಯ ಆವರಣದಲ್ಲಿ ನಡೆದ ವಕೀಲರ ಸಂಘದ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಈ ವೇಳೆ ಶಾಸಕಾಂಗಕ್ಕಿಂತ ನ್ಯಾಯಾಂಗ ಶ್ರೇಷ್ಠ ಎಂಬುದನ್ನು ತೋರಿಸಿ ಸರಳತೆ ಮೆರೆದರು.

ಶಿಗ್ಗಾಂವಿ ವಕೀಲ ಸಂಘ ಕಟ್ಟಡದ ಶಂಕುಸ್ಥಾಪನೆ

ಕಟ್ಟಡದ ಗುದ್ದಲಿ ಪೂಜೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಚಿನ್ ಮಗದುಮ್ ಬಳಿ ಸಿಎಂ ಮಾತುಕತೆ ನಡೆಸಿದರು. ಸಿಎಂ ಸರಳತೆ ಹಾಗೂ ಪ್ರೀತಿಯ ಮಾತಿಗೆ ಮನಸೋತ ನ್ಯಾಯಮೂರ್ತಿಗಳು ತಾವೇ ಮೊದಲು ಗುದ್ದಲಿ ಪೂಜೆ ಮಾಡಿದರು. ಬಳಿಕ ಸಿಎಂ ಬೊಮ್ಮಾಯಿ ಪೂಜೆ ನೆರವೇರಿಸಿದರು. ಕೃಷಿ ಸಚಿವ ಬಿ‌.ಸಿ.ಪಾಟೀಲ್​, ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿಗಳು ಸೇರಿದಂತೆ ವಕೀಲರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಸಿಎಂ ಕಾರ್ಯಕ್ರಮಕ್ಕೆ ಸ್ವಪಕ್ಷದ ಶಾಸಕ ಓಲೇಕಾರರಿಂದಲೇ ಕಪ್ಪು ಬಾವುಟ ಪ್ರದರ್ಶನಕ್ಕೆ ನಿರ್ಧಾರ

Last Updated : Aug 21, 2022, 1:36 PM IST

ABOUT THE AUTHOR

...view details