ಹಾವೇರಿ:ರಾಣೆಬೆನ್ನೂರು ತಾಲೂಕಿನ ಒಡೆರಾಯನಹಳ್ಳಿ ಗ್ರಾಮದ ಬಳಿಯಲ್ಲಿ ಚಿರತೆಯೊಂದು ಸೆರೆಯಾಗಿದೆ.
ರಾಣೆಬೆನ್ನೂರಲ್ಲಿ ರೇಷ್ಮೆ ಮನೆ ಹೊಕ್ಕಿದ್ದ ಚಿರತೆ! - ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿ
ಎಮ್ಮೆ ಕರ ತಿನ್ನಲು ಬಂದು ರೇಷ್ಮೆ ಮನೆ ಸೇರಿದ್ದ ಚಿರತೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ರೇಷ್ಮೆ ಮನೆಯಲ್ಲಿ ಸೆರೆಯಾಗಿದ್ದ ಚಿರತೆ ರಕ್ಷಣೆ
ಹಾವೇರಿ: ರೇಷ್ಮೆ ಮನೆಯಲ್ಲಿ ಸೆರೆಯಾಗಿದ್ದ ಚಿರತೆ
ಎಮ್ಮೆ ಕರ ತಿನ್ನಲು ಬಂದ ಚಿರತೆ ರೇಷ್ಮೆ ಮನೆ ಸೇರಿದ್ದನ್ನ ಗಮನಿಸಿದ ಸ್ಥಳೀಯರು ಕೂಡಲೇ ಹೊರಗಿನಿಂದ ಬಾಗಿಲು ಹಾಕಿದ್ದಾರೆ.ನಂತರ, ಬೆಳಗಿನ ಜಾವ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಳೆದ ಎರಡು ಮೂರು ದಿನಗಳಿಂದ ಜಮೀನಿನ ಸುತ್ತಮುತ್ತ ಓಡಾಡಿಕೊಂಡು ಆತಂಕ ಹುಟ್ಟಿಸಿದ್ದ ಚಿರತೆ ಸಿಕ್ಕಿಬಿದ್ದಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.