ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಹಲವು ಗ್ರಾಮಗಳಲ್ಲಿ ಚಿರತೆ ಕಾಟ ಮತ್ತೆ ಶುರುವಾಗಿದೆ. ತಾಲೂಕಿನ ಅರೇಮಲ್ಲಾಪುರ -ಯಕ್ಲಾಸಪುರ ಗ್ರಾಮದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ರಸ್ತೆ ಬದಿಯಲ್ಲಿ ಚಿರತೆ ಕುಳಿತಿರುವ ವಿಡಿಯೋವನ್ನು ವಾಹನದಲ್ಲಿ ಹೋಗುವವರು ಸೆರೆಹಿಡಿದಿದ್ದಾರೆ.
ಹಾವೇರಿ: ರಸ್ತೆ ಬದಿಯಲ್ಲಿ ಚಿರತೆ ಪ್ರತ್ಯಕ್ಷ.. ಭೀತಿಗೊಳಗಾದ ಜನ - ETV Bharath Kannada
ವನ್ಯಜೀವಿ ಮತ್ತು ಮಾನವ ಸಂಘರ್ಷ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಡಿಕೇರಿ ಮತ್ತು ಚಿಕ್ಕಮಗಳೂರು ಜಾಗದಲ್ಲಿ ಆನೆ ಆದರೆ ಮೈಸೂರು ಮತ್ತು ಹಾವೇರಿ ಭಾಗದಲ್ಲಿ ಚಿರತೆಗಳ ಕಾಟ ಅತಿಯಾಗಿದೆ. ವನ್ಯ ಜೀವಿಗಳ ಉಪಟಳಕ್ಕೆ ಅರಣ್ಯ ಇಲಾಖೆ ಸುಸ್ತಾಗಿದೆ.
ರಸ್ತೆ ಬದಿಯಲ್ಲಿ ಚಿರತೆ ಪ್ರತ್ಯಕ್ಷ
ಹುಣಸಿಕಟ್ಟೆ ಗ್ರಾಮದ ಬಳಿ ಮೊನ್ನೆ ಕುರಿ ಫಾರ್ಮ್ ನುಗ್ಗಿ ಹಸುವನ್ನ ತಿಂದು ಹಾಕಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈಗ ಮತ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ವೈರಲ್ ಆಗಿದ್ದು, ಮೆಡ್ಲೇರಿ, ಅರೇಮಲ್ಲಾಪುರ, ಯಕ್ಲಾಸಪುರ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರಿಗೆ ಚಿರತೆಯ ಭಯ ಉಂಟಾಗಿದೆ. ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ:ತಿ.ನರಸೀಪುರ: ಮುಂದುವರೆದ ಚಿರತೆ ಹಾವಳಿ.. ಮೇಕೆ ಬಲಿ