ಕರ್ನಾಟಕ

karnataka

ETV Bharat / state

ಮಳೆ-ಗಾಳಿಗೆ ಉರುಳಿದ ಕೊರೊನಾ ಚೆಕ್​ಪೋಸ್ಟ್; ಪೊಲೀಸ್​ ಹಾಗೂ ಆಶಾಕಾರ್ಯಕರ್ತೆಗೆ ಗಾಯ - ಹಾವೇರಿ ಸುದ್ದಿ

ಭಾರಿ ಗಾಳಿ-ಮಳೆಗೆ ಕೊರೊನಾ ತಪಾಸಣೆಗೆ ಹಾಕಿದ ಚೆಕ್ ಪೋಸ್ಟ್ ಕಿತ್ತು ಹೋಗಿ ಪೊಲೀಸ್​ ಮುಖ್ಯಪೇದೆ ಹಾಗೂ ಆಶಾ ಕಾರ್ಯಕರ್ತೆ ಗಾಯಗೊಂಡಿರುವ ಪ್ರಕರಣ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದಿದೆ.

check post collapsed due to heavy rain and wind
ಉರುಳಿದ ಕೊರೊನಾ ಚೆಕ್​ಪೋಸ್ಟ್​

By

Published : May 3, 2020, 8:33 PM IST

ರಾಣೆಬೆನ್ನೂರು:ಸಂಜೆ ಸುರಿದ ಭಾರಿ ಗಾಳಿ-ಮಳೆಗೆ ಕೊರೊನಾ ತಪಾಸಣೆಗೆ ಹಾಕಿದ ಚೆಕ್ ಪೋಸ್ಟ್ ಕಿತ್ತು ಹೋಗಿ, ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಮಾಕನೂರ ಕ್ರಾಸ್ ಬಳಿ ನಡೆದಿದೆ.

ಉರುಳಿದ ಕೊರೊನಾ ಚೆಕ್​ಪೋಸ್ಟ್​

ಕೊರೊನಾ ತಪಾಸಣೆಗಾಗಿ ಮಾಕನೂರ ಗ್ರಾಮದ ಕ್ರಾಸ್ ಬಳಿ ಟೆಂಟ್ ಹಾಕಲಾಗಿತ್ತು. ಈ ಟೆಂಟ್ ಒಳಗೆ ಇಂದು ಪೊಲೀಸ್​ ಇಲಾಖೆಯ ಮುಖ್ಯಪೇದೆ ಮತ್ತು ಆಶಾ ಕಾರ್ಯಕರ್ತೆ ಕಾರ್ಯನಿರ್ವಹಿಸುತ್ತಿರುವಾಗ ಏಕಾಏಕಿ ಮಳೆ-ಗಾಳಿ ಶುರುವಾಗಿದೆ. ರಕ್ಷಣೆಗಾಗಿ ಟೆಂಟ್​ನ ಒಂದು ಭಾಗದಲ್ಲಿ ನಿಂತಿರುವ ಸಮಯದಲ್ಲಿ ಭಾರಿ ಗಾಳಿಯಿಂದ ತಗಡು(ಶೀಟ್)ಮುರಿದು ಪೊಲೀಸ್​ ಸಿಬ್ಬಂದಿ ಮೇಲೆ ಮತ್ತು ಆಶಾ ಕಾರ್ಯಕರ್ತೆ ಮೇಲೆ ಬಿದ್ದಿವೆ. ಇದರಿಂದ ಇಬ್ಬರೂ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಮತ್ತು ಪೊಲೀಸ್​ ಸಿಬ್ಬಂದಿ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಗಾಯಗೊಂಡ ಮುಖ್ಯಪೇದೆ

ಅಲ್ಲದೆ ಚೆಕ್ ಪೋಸ್ಟ್ ಬಳಿ ತಪಾಸಣೆಗೆ ನಿಲ್ಲಿಸಿದ ಕಾರಿನ ಗಾಜಿಗೆ ಹಾನಿಯಾಗಿದ್ದು, ಸ್ಥಳದಲ್ಲಿದ್ದ ಕುರ್ಚಿಗಳು ಮುರಿದಿವೆ.

ABOUT THE AUTHOR

...view details