ಹಾವೇರಿ: ಚುನಾವಣೆಗಳಲ್ಲಿ ಆಣೆ ಪ್ರಮಾಣದ ಪ್ರಹಸನ ಈ ಹಿಂದೆ ಸಹ ಇತ್ತು. ಆದರೆ ಇಷ್ಟು ಅತಿಯಾಗಿರಲಿಲ್ಲ ಎಂದು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಂಡ್ಯ ಚುನಾವಣೆ ಕುರಿತು ಟೀಕಿಸಿದರು.
ಮೋದಿಗೆ ಸೋಲು ಗೊತ್ತೇ ಇಲ್ಲ: ಚಕ್ರವರ್ತಿ ಸೂಲಿಬೆಲೆ - undefined
ಮಂಡ್ಯ ಕ್ಷೇತ್ರದಲ್ಲಿ ಆಣೆ ಪ್ರಮಾಣ ಪ್ರಹಸನ ಅತಿಯಾಗಿದೆ ಎಂದು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಮಂಡ್ಯ ಕ್ಷೇತ್ರದಲ್ಲಿ ಆಣೆ ಪ್ರಮಾಣ ಅತ್ಯಧಿಕವಾಗಿದೆ. ಆದರೆ ಮತದಾರರು ಈ ರೀತಿಯ ಯಾವುದೇ ಆಣೆ ಪ್ರಮಾಣಕ್ಕೆ ಮರುಳಾಗಬಾರದು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮದರ್ಶಿ ಡಿ.ವಿರೇಂದ್ರ ಹೆಗ್ಗಡೆ ಹೇಳಿದಂತೆ ಅಣೆ ಪ್ರಮಾಣದ ಪರಿಣಾಮ ಅವರ ಮೇಲೆಯೇ ಆಗುತ್ತೆ ಎಂದು ಕುಟುಕಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರಿಗೆ ಚುನಾವಣೆಯಲ್ಲಿ ಗೆಲವು ಸಾಧಿಸುವುದು ಗೊತ್ತೆ ಹೊರತು ಸೋತು ಗೊತ್ತಿಲ್ಲ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಕೋಮುಗಲಭೆಗಳು ನಡೆದವು. ಅದರ ಅಲ್ಪ ಭಾಗವು ಸಹ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾಗ ನಡೆದಿಲ್ಲ ಎಂದರು.