ಹಾವೇರಿ :ಆಗಸ್ಟ್ ಮೊದಲವಾರ ಸುರಿದ ಮಳೆಗೆ ಆಗಿರುವ ಬೆಳೆ ಹಾನಿ ಬಗ್ಗೆ ಅಧ್ಯಯನ ನಡೆಸಲು ಹಾವೇರಿ ಜಿಲ್ಲೆಯ ಚಿಕ್ಕಲಿಂಗದಹಳ್ಳಿ ಗ್ರಾಮದ ರೈತರ ಜಮೀನಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿದೆ. ರೈತರು ಬಿತ್ತಿದ ಬೆಳೆ ಮತ್ತು ಖರ್ಚಿನ ಬಗ್ಗೆ ತಂಡ ಮಾಹಿತಿ ಕಲೆಹಾಕುತ್ತಿದೆ.
ಅತಿವೃಷ್ಟಿಯಿಂದ ಬೆಳೆ ಹಾನಿ: ಹಾವೇರಿಯಲ್ಲಿ ಕೇಂದ್ರ ತಂಡದಿಂದ ಅಧ್ಯಯನ
ಮಳೆಹಾನಿ ವೀಕ್ಷಿಸಲು ಕೇಂದ್ರದಿಂದ ಬಂದ ಮೂರು ತಂಡದ ಪೈಕಿ ಒಂದು ತಂಡ ಹಾವೇರಿಯಲ್ಲಿ ಬೆಳೆ ಹಾನಿ ಅಧ್ಯಯನ ನಡೆಸುತ್ತಿದೆ.
ಹಾವೇರಿಯಲ್ಲಿ ಕೇಂದ್ರ ತಂಡದಿಂದ ಅಧ್ಯಯನ
ಕೇಂದ್ರ ತಂಡದ ಭೇಟಿ ವೇಳೆ ರೈತ ನಾಗಪ್ಪ ಪೂಜಾರ ಎಂಬ ರೈತ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾನೆ. ಈ ವೇಳೆ ಅಧಿಕಾರಿಗಳು ಜಮೀನಿಗಿಳಿದು ಬೆಳೆ ಹಾನಿಯನ್ನು ವೀಕ್ಷಿಸಿದರು.
ಇದನ್ನೂ ಓದಿ :ಮಳೆ ಹಾನಿ: ಕಲಬುರಗಿಗೆ ಕೇಂದ್ರ ಅಧ್ಯಯನ ತಂಡ ಭೇಟಿ, ಪರಿಶೀಲನೆ