ಕರ್ನಾಟಕ

karnataka

ETV Bharat / state

ರೈಲು ಬಿಟ್ಟು ಹೋದ್ರಾ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರು... ನಿರಾಶ್ರಿತರ ಆಕ್ರೋಶ - Irani matt

ಐರಣಿ ಮಠದಲ್ಲಿ ಹಾವೇರಿ ಜಿಲ್ಲೆಯ ನೆರೆ ಪೀಡಿತ ಹೊಸರಿತ್ತಿ ಗ್ರಾಮದ ನಿರಾಶ್ರಿತರಿಗೆ ಐರಣಿ ಮಠದಿಂದ ಪರಿಹಾರ ಸಾಮಾಗ್ರಿ ವಿತರಣೆ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಬಾರದೇ ಕೈಕೊಟ್ಟಿದ್ದಾರೆ.

ಐರಣಿ ಮಠ

By

Published : Oct 17, 2019, 8:13 PM IST

ರಾಣೆಬೆನ್ನೂರು:ನೆರೆ ಪೀಡಿತ ಗ್ರಾಮದ ನಿರಾಶ್ರಿತರಿಗೆ ಪರಿಹಾರ ಸಾಮಾಗ್ರಿ ವಿತರಣೆ ಮಾಡಬೇಕಾಗಿದ್ದ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಕಾರ್ಯಕ್ರಮಕ್ಕೆ ಬಾರದೆ ರೈಲು ಬಿಟ್ಟು ಹೋಗಿದ್ದಾರೆ.

ಐರಣಿ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ

ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ಐರಣಿ ಮಠದಲ್ಲಿ ಹಾವೇರಿ ಜಿಲ್ಲೆಯ ನೆರೆ ಪೀಡಿತ ಹೊಸರಿತ್ತಿ ಗ್ರಾಮದ ನಿರಾಶ್ರಿತರಿಗೆ ಐರಣಿ ಮಠದಿಂದ ಪರಿಹಾರ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಸಚಿವರ ಒಮ್ಮತದ ಪ್ರಕಾರ ಕಾರ್ಯಕ್ರಮವನ್ನು ಮಧ್ಯಾಹ್ನ 3.30ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಸಂಜೆ 6 ಗಂಟೆಯಾದರೂ ರೈಲ್ವೆ ಸಚಿವರು ಕಾರ್ಯಕ್ರಮದತ್ತ ಸುಳಿಯಲಿಲ್ಲ. ಇದರಿಂದ ಪರಿಹಾರ ಸಾಮಾಗ್ರಿ ಸ್ವೀಕಾರ ಮಾಡಬೇಕಾದ ನಿರಾಶ್ರಿತರು ಕಾದು ಕಾದು ಸುಸ್ತಾಗಿ ತಮ್ಮ ಊರಿಗೆ ಹೋಗಲು ಮುಂದಾದರು.

ನಂತರ ಕಾರ್ಯಕ್ರಮ ಆಯೋಜಕರು ನಿರಾಶ್ರಿತರನ್ನು ‌ಮನವೊಲಿಸುವ ಮೂಲಕ ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರ ಮುಖೇನ ಸಾಮಾಗ್ರಿ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ, ಚಂದ್ರಪ್ಪ ಬೇಡರ, ಬಾಬಣ್ಣ ಶೆಟ್ಟರ್​, ಮಂಗಳಗೌರಿ ಪೂಜಾರ, ಭಾರತಿ ಜಂಬಗಿ ಭಾಗವಹಿಸಿದ್ದರು.

ABOUT THE AUTHOR

...view details