ಕರ್ನಾಟಕ

karnataka

ETV Bharat / state

ಪ್ರಚೋದನಾಕಾರಿ ಭಾಷಣ ಆರೋಪ: ರಾಕೇಶ್​ ಟಿಕಾಯತ್ ವಿರುದ್ಧ ಎಫ್​ಐಆರ್​​​ - case register against Rakesh tikayath in Haveri

ದೆಹಲಿ ಮಾದರಿಯಲ್ಲೇ ಬೆಂಗಳೂರಿನಲ್ಲಿಯೂ ಹೋರಾಟ ಮುಂದುವರೆಸಬೇಕು ಎಂಬ ಟಿಕಾಯತ್​ ಹೇಳಿಕೆ ರೈತರನ್ನು ಉದ್ರೇಕಗೊಳಿಸುವಂತಿದೆ ಎಂಬ ಆರೋಪದ ಮೇರೆಗೆ ಐಪಿಸಿ ಕಲಂ 154ರ ಅಡಿ ನಗರಠಾಣೆ ಸಿಪಿಐ ಪ್ರಹ್ಲಾದ್​​ ದೂರು ದಾಖಲಿಸಿಕೊಂಡಿದ್ದಾರೆ.

rakesh-tikayath
ರಾಕೇಶ್​ ಟಿಕಾಯತ್

By

Published : Mar 24, 2021, 8:38 PM IST

ಹಾವೇರಿ:ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್​ ವಿರುದ್ಧ ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ.

ಎಫ್​ಐಆರ್ ಪ್ರತಿ

ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಮಾರ್ಚ್ 21, 2021ರಂದು ನಡೆದಿದ್ದ ರೈತ ಮಹಾಪಂಚಾಯತ್ ಸಮಾವೇಶದಲ್ಲಿ ಭಾಷಣ ಮಾಡಿದ್ದ ಟಿಕಾಯತ್, ದೆಹಲಿಯಲ್ಲಿ ಟ್ರ್ಯಾಕ್ಟರ್​ಗಳನ್ನ ಬಳಸಿಕೊಂಡು ಪ್ರತಿಭಟನೆ ಮಾಡಿದಂತೆ ಬೆಂಗಳೂರಿನಲ್ಲೂ ಟ್ರ್ಯಾಕ್ಟರ್​ಗಳನ್ನು ಅಸ್ತ್ರಗಳನ್ನಾಗಿ ಬಳಸಿಕೊಂಡು ಪ್ರತಿಭಟನೆ ಮಾಡುವಂತೆ ಕರೆ ನೀಡಿದ್ದರು.

ಎಫ್​ಐಆರ್ ಪ್ರತಿ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೇಶಾದ್ಯಂತ ರೈತ ಚಳುವಳಿಗಳು ನಡೆಯುತ್ತಿದೆ. ಈವರೆಗೆ ಸಾಕಷ್ಟು ಬಾರಿ ಸರ್ಕಾರದೊಂದಿಗೆ ಮಾತುಕತೆ ನಡೆಸಿರುವ ರೈತ ಸಂಘಟನೆ, ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ವಿಫಲವಾಗಿದೆ ಎಂದಿದೆ. ಹಾಗಾಗಿ ರೈತ ದೇಶಾದ್ಯಂತ ರೈತರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ರೈತ ಮಹಾಪಂಚಾಯತ್​​ ಸಮಾವೇಶವನ್ನು ರಾಜ್ಯಾವಾರು ಹಮ್ಮಿಕೊಳ್ಳುತ್ತಿದೆ.

ಎಫ್​ಐಆರ್ ಪ್ರತಿ

ಓದಿ:ಬರ್ತ್‌ಡೇ ಪಾರ್ಟಿ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ : ಎಸ್​ಪಿ ಹೀಗಂತಾರೆ..

ಇದೀಗ ದೆಹಲಿ ಮಾದರಿಯಲ್ಲೇ ಬೆಂಗಳೂರಿನಲ್ಲಿಯೂ ಹೋರಾಟವನ್ನು ಮುಂದುವರೆಸಬೇಕು ಎಂಬ ಟಿಕಾಯತ್​ ಹೇಳಿಕೆ ರೈತರನ್ನು ಉದ್ರೇಕಗೊಳಿಸುವಂತಿದೆ ಎಂಬ ಆರೋಪದ ಮೇರೆಗೆ ಐಪಿಸಿ ಕಲಂ 154ರ ಅಡಿ ನಗರಠಾಣೆ ಸಿಪಿಐ ಪ್ರಹ್ಲಾದ್​​ ದೂರು ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details