ಕರ್ನಾಟಕ

karnataka

ETV Bharat / state

ಲಂಚಕ್ಕೆ ಬೇಡಿಕೆಯಿಡೋದಲ್ಲದೇ ಹಲ್ಲೆಗೆ ಮುಂದಾಗಿದ್ದ ಆರ್​ಟಿಐ ಕಾರ್ಯಕರ್ತನ ವಿರುದ್ಧ ಕೇಸ್.. - Ranebennur News

ಸುರೇಂದ್ರ ಜ್ಯೋತಿ ವಿರುದ್ಧ ಕುಬೇರಪ್ಪ ಜಾತಿ ನಿಂದನೆ ಕೇಸು ದಾಖಲಿಸಿದ್ದು, ನಕಲಿ ಮಾಹಿತಿ ಹಕ್ಕು ಹೋರಾಟಗಾರ ಸುರೇಂದ್ರ ಜ್ಯೋತಿ ತೆಲೆ ಮರೆಸಿಕೊಂಡಿದ್ದಾನೆ.

Case filed against fake RTI activist for bribery and assault
ಲಂಚಕ್ಕೆ ಬಾಯ್ಕಳೆದಿದ್ದಲ್ಲದೆ ಹಲ್ಲೆಗೆ ಮುಂದಾಗಿದ್ದ ಆರ್​ಟಿಐ ಕಾರ್ಯಕರ್ತನ ವಿರುದ್ಧ ಕೇಸು ದಾಖಲು..

By

Published : Jun 7, 2020, 8:21 PM IST

ರಾಣೆಬೆನ್ನೂರು: ಹತ್ತು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ನಕಲಿ ಮಾಹಿತಿ ಹಕ್ಕು ಕಾರ್ಯಕರ್ತನ ಮೇಲೆ ರಾಣೇಬೆನ್ನೂರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ಆರ್​ಟಿಐ ಕಾರ್ಯಕರ್ತನ ವಿರುದ್ಧ ಕೇಸು ದಾಖಲು..

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹರನಗಿರಿ ಗ್ರಾಮದ ಸುರೇಂದ್ರ ಜ್ಯೋತಿ ಎಂಬ ನಕಲಿ ಮಾಹಿತಿ ಹಕ್ಕು ಕಾರ್ಯಕರ್ತನ ಮೇಲೆ ಬೇಲೂರ ಗ್ರಾಮದ ಕುಬೇರಪ್ಪ ಚಳಗೇರಿ ಎಂಬುವರು ರಾಣೇಬೆನ್ನೂರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಏನಿದು ಪ್ರಕರಣ? :ನಕಲಿ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಜ್ಯೋತಿ ರಾಣೇಬೆನ್ನೂರು ತಾಲೂಕಿನ ಬೇಲೂರು ಗ್ರಾಮದ ಮರಳಿನ ಕೇಂದ್ರದ ಮಾಲೀಕರಿಂದ ₹10 ಕೊಡಿಸುವಂತೆ ಕುಬೇರಪ್ಪನ ಹತ್ತಿರ ಬೇಡಿಕೆ ಇಟ್ಟಿದ್ದ. ಇದಕ್ಕೆ ಒಪ್ಪದಿದ್ದಕ್ಕೆ ಸುರೇಂದ್ರ ಜ್ಯೋತಿ ಮರಳಿನ ಮಾಲೀಕರಿಗೆ ಮತ್ತು ಕುಬೇರಪ್ಪನಿಗೆ ಅವಾಚ್ಯ ಶಬ್ಧದಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದ ಎಂದು ಆರೋಪಿಸಲಾಗಿದೆ.

ಸುರೇಂದ್ರ ಜ್ಯೋತಿ ವಿರುದ್ಧ ಕುಬೇರಪ್ಪ ಜಾತಿ ನಿಂದನೆ ಕೇಸು ದಾಖಲಿಸಿದ್ದು, ನಕಲಿ ಮಾಹಿತಿ ಹಕ್ಕು ಹೋರಾಟಗಾರ ಸುರೇಂದ್ರ ಜ್ಯೋತಿ ತೆಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಆರೋಪಿ ಪತ್ತೆಗೆ ಹುಡುಕಾಟ ಮುಂದುವರೆಸಿದ್ದಾರೆ.

ABOUT THE AUTHOR

...view details